ಇರಕಲ್ ಗ್ರಾಮಸ್ಥರಿಗೆ ಪಡಿತರ ವಿತರಿಸಿ

ಕವಿತಾಳ ಸಮೀಪದ ಇರಕಲ್ ಗ್ರಾಮದಲ್ಲಿ ಪಡಿತರ ಕಾರ್ಡ್‌ದಾರರು ಪಡಿತರ ವಿತರಿಸುವಂತೆ ಒತ್ತಾಯಿಸಿದರು. ಪ್ರಮುಖರಾದ ರಾಘವೇಂದ್ರ, ಹನುಮಂತ, ರಮೇಶ, ದುರುಗಪ್ಪ, ಮಲ್ಲಪ್ಪ, ಅಮರಮ್ಮ, ಯಲ್ಲಮ್ಮ ಇತರರಿದ್ದರು.
ಕವಿತಾಳ ಸಮೀಪದ ಇರಕಲ್ ಗ್ರಾಮದಲ್ಲಿ ಪಡಿತರ ಕಾರ್ಡ್‌ದಾರರು ಪಡಿತರ ವಿತರಿಸುವಂತೆ ಒತ್ತಾಯಿಸಿದರು. ಪ್ರಮುಖರಾದ ರಾಘವೇಂದ್ರ, ಹನುಮಂತ, ರಮೇಶ, ದುರುಗಪ್ಪ, ಮಲ್ಲಪ್ಪ, ಅಮರಮ್ಮ, ಯಲ್ಲಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇರಕಲ್ ಗ್ರಾಮ
  • ಪಡಿತರ ವಿತರಿಸಿ
  • ನ್ಯಾಯಬೆಲೆ ಅಂಗಡಿ

ಇರಕಲ್ ಗ್ರಾಮಸ್ಥರಿಗೆ ಪಡಿತರ ವಿತರಿಸಿ

ಕವಿತಾಳ: ಸಮೀಪದ ಮಸ್ಕಿ ತಾಲೂಕಿನ ವಟಗಲ್ ಗ್ರಾಪಂ ವ್ಯಾಪ್ತಿಯ ಇರಕಲ್ ಗ್ರಾಮದಲ್ಲಿ ಕಳೆದ ಮೂರುತಿಂಗಳಿನಿಂದ ಪಡಿತರ ವಿತರಿಸದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದಲ್ಲಿ 175ಕ್ಕೂ ಕುಟುಂಬಗಳಿದ್ದು, ಬಸ್ಸಾಪುರ ನ್ಯಾಯಬೆಲೆ ಅಂಗಡಿಯ ಪಡಿತರ ಕೇಂದ್ರದಿಂದ ಗ್ರಾಮದಲ್ಲಿ ಪಡಿತರ ವಿತರಿಸಲಾಗುತ್ತಿದೆ. ಆದರೆ, ಕಳೆದ 3 ತಿಂಗಳಿನಿಂದ ಪಡಿತರ ವ್ಯವಸ್ಥಾಪಕರನ್ನು ಕೇಳಿದರೆ ನಾಳೆ, ಮುಂದಿನ ವಾರ ವಿತರಿಸಲಾಗುವುದು ಎನ್ನುತ್ತಿದ್ದಾರೆ.
ಆದರೆ, ಈವರೆಗೂ ಪಡಿತರ ವಿತರಿಸದೇ ಸಮಸ್ಯೆ ಎದುರಾಗಿದೆ. ಈ ಮೊದಲು ಗ್ರಾಮಕ್ಕೆ ಬಂದು ಪಡಿತರ ವಿತರಿಸುತ್ತಿದ್ದರು. ಪ್ರತಿ ಕಾರ್ಡ್‌ದಾರರಿಂದ 20 ರೂ. ಪಡೆದಿದ್ದು, ಈವರೆಗೂ ಪಡಿತರ ವಿತರಿಸಿಲ್ಲ. ನಮ್ಮಲ್ಲಿ ನೀರಾವರಿ ಸೌಲಭ್ಯವಿಲ್ಲ ಒಂದೊತ್ತಿನ ಊಟಕ್ಕೂ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಕೂಲಿಮಾಡಿ ಬದುಕು ಸಾಗಿಸುವ ನಾವು ಪಡಿತರವನ್ನೇ ಅವಲಂಬಿಸಿದ್ದೇವೆ. ಕೂಡಲೇ ಪಡಿತರ ವಿತರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಬಸವರಾಜ, ನಾಗರಾಜ, ಪರಶುರಾಮ, ರಾಘವೇಂದ್ರ, ಹನುಮಂತ, ರಮೇಶ, ದುರುಗಪ್ಪ, ಮಲ್ಲಪ್ಪ, ಅಮರಮ್ಮ, ಯಲ್ಲಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net