140ನೇ ವಿಶ್ವ ಕಾರ್ಮಿಕ ದಿನಾಚರಣೆಯನ್ನು ರಾಯಚೂರಿನಲ್ಲಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕಾರ್ಮಿಕರ ರ್ಯಾಲಿ ನಡೆಸಲಾಯಿತು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರವೀಣರೆಡ್ಡಿ ಗುಂಜಳ್ಳಿ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ವಿಮಾನೌಕರರ ಸಂಘದ ಮುಖಂಡರಾದ ಎಂ. ಶರಣಗೌಡ, ಎಂ. ರವಿ, ಕೆ.ಜಿ. ವಿರೇಶ, ಔಷಧಿ ಪ್ರತಿನಿಧಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುರಾಜ ದೇಸಾಯಿ, ಪ್ರಮುಖರಾದ ಭಾಸ್ಕರ, ಜಿಲ್ಲಾನಿ ಪಾಷ್, ತೋಟಯ್ಯ ವೀರಭದ್ರ ಸುರಾನ, ನಾಗೇಂದ್ರ, ಗಂಗಮ್ಮ, ನಿರ್ಮಲಾ, ಜಂಬಣ್ಣ ಇದ್ದರು.
ರಾಯಚೂರು 140ನೇ ವಿಶ್ವ ಕಾರ್ಮಿಕ ದಿನಾಚರಣೆಯನ್ನು ನಗರದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕಾರ್ಮಿಕರ ರ್ಯಾಲಿ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರವೀಣರೆಡ್ಡಿ ಗುಂಜಳ್ಳಿ ಮಾತನಾಡಿ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು 4 ಹೊಸ ಕಾರ್ಮಿಕರ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ದೇಶದ ಕಾರ್ಮಿಕ ವರ್ಗವು ಸ್ವಾತಂತ್ರ್ಯ ಪೂರ್ವದಿಂದಲೂ ಪಡೆದ ಹಲವು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಕೆಲಸದ ಅವಧಿ ಹೆಚ್ಚಳ, ಸಾಮಾಜಿಕ ರಕ್ಷಣೆಯ ಯೋಜನೆಗಳನ್ನು ದುರ್ಬಳಗೊಳಿಸುವುದು, ನಿಯಮಿತವಧಿಯಲ್ಲಿ ಕಾರ್ಮಿಕರನ್ನು ನೇಮಕ ಮಾಡಲು ಅವಕಾಶ ಹಾಗೂ ಕಾರ್ಖಾನೆಗಳನ್ನು ಮುಚ್ಚಲು ಮಾಲೀಕರಿಗೆ ಮುಕ್ತ ಅವಕಾಶ ಮಾಡಿಕೊಡುವ ಮೂಲಕ ಮಾರಕವಾದ ನಿಯಾಮಗಳನ್ನು ಈ ಸಂಹಿತೆಗಳ ಮೂಲಕ ಜಾರಿ ಮಾಡಲಾಗಿದೆ.
ಮಾಲೀಕರು ಮಾಡುವ ಅಮಾನವಿಯ ಶೋಷಣೆಯ ವಿರುದ್ಧ ಕಾನೂನು ಬದ್ದ ಮುಷ್ಕರ ಮಾಡುವ ಹಕ್ಕನ್ನು ಈ ಸಂಹಿತೆಗಳು ನಿರಾಕಾರಿಸುತ್ತವೆ. ಇಂತಹ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಐಕ್ಯ ಹೋರಾಟಕ್ಕೆ ಕಾರ್ಮಿಕರು ಮುಂದಾಗಬೇಕಾದ ಅಗತ್ಯವಿದೆ, ಇಲ್ಲವಾದಲ್ಲಿ ಕಾರ್ಮಿಕರಿಗೆ ಭವಿಷ್ಯವಿಲ್ಲ. ರಾಜ್ಯದಲ್ಲಿ ರಾಜ್ಯ ಸರ್ಕಾರ ದೇಶದ ಸಂವಿಧಾನವು ನೀಡಿದ ಅವಕಾಶಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರಿ ಈ ಸಂಹಿತೆಗಳಿಗೆ ಕಾರ್ಮಿಕರ ಪರವಾದ ತಿದ್ದುಪಡಿಗಳನ್ನು ಮಾಡಬೇಕೆಂದು ಒತ್ತಾಯಿಸಿದರು.
ಪ್ರಸ್ತಾವಿಕವಾಗಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ ಮಾತನಾಡಿದರು.
ಈ ಸಂದರ್ಭದಲ್ಲಿ ವಿಮಾನೌಕರರ ಸಂಘದ ಮುಖಂಡರಾದ ಎಂ. ಶರಣಗೌಡ, ಎಂ. ರವಿ, ಕೆ.ಜಿ. ವಿರೇಶ, ಔಷಧಿ ಪ್ರತಿನಿಧಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುರಾಜ ದೇಸಾಯಿ, ಪ್ರಮುಖರಾದ ಭಾಸ್ಕರ, ಜಿಲ್ಲಾನಿ ಪಾಷ್, ತೋಟಯ್ಯ ವೀರಭದ್ರ ಸುರಾನ, ನಾಗೇಂದ್ರ, ಗಂಗಮ್ಮ, ನಿರ್ಮಲಾ, ಜಂಬಣ್ಣ ಸೇರಿದಂತೆ ಕಾರ್ಮಿಕರು ಸೇರಿ ಅನೇಕರು ಇದ್ದರು.