

ಮಾನ್ವಿ: ರಾಜ್ಯದಲ್ಲಿ ರಜಪೂತ ಸಮುದಾಯದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು, ಸರ್ಕಾರ ಕೂಡಲೇ ರಜಪೂತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ರಜಪೂತ ಸಂಘದ ತಾಲೂಕು ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಸಮಗ್ರ ಅಧ್ಯಯನ ಕೈಗೊಂಡು ಅಭಿವೃದ್ಧಿ ನಿಗಮ ಸ್ಥಾಪಿಸಿ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಲಾಯಿತು. ಪ್ರಮುಖರಾದ ಆನಂದಸಿಂಗ್, ಮೋಹನ್‌ಸಿಂಗ್, ರಘುನಾಥ ಪ್ರಸಾದ ಮಿಶ್ರಾ, ತುಳುಜಾರಾಮ್ ಸಿಂಗ್,ರಾಜುಸಿಂಗ್, ರವಿಸಿಂಗ್, ವಿಕ್ರಮ ಮಿಶ್ರಾ, ದಿಲೀಪ್ ಸಿಂಗ್, ಅರುಣಸಿಂಗ್, ಮೋತಿಲಾಲ್ ಸಿಂಗ್ ಇದ್ದರು.