ರಾಯಚೂರು ಜಿಲ್ಲೆ ಬರಪೀಡಿತವೆಂದು ಘೋಷಿಸಿ

ದೇವದುರ್ಗದಲ್ಲಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ರೈತ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಕೆ.ಗಿರಲಿಂಗ ಸ್ವಾಮಿ,  ಮುಖಂಡರಾದ ದುರ್ಗಣ್ಣ ಗಲಗ, ಸಿದ್ಲಿಂಗಪ್ಪ, ಶಫೀಕ್ ಪಾಷಾ, ಮಲ್ಲಪ್ಪ ಮುಂಡರಗಿ, ಕೃಷ್ಣಪ್ಪ ಇದ್ದರು.
ದೇವದುರ್ಗದಲ್ಲಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ರೈತ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಕೆ.ಗಿರಲಿಂಗ ಸ್ವಾಮಿ, ಮುಖಂಡರಾದ ದುರ್ಗಣ್ಣ ಗಲಗ, ಸಿದ್ಲಿಂಗಪ್ಪ, ಶಫೀಕ್ ಪಾಷಾ, ಮಲ್ಲಪ್ಪ ಮುಂಡರಗಿ, ಕೃಷ್ಣಪ್ಪ ಇದ್ದರು.
Published on
ದೇವದುರ್ಗ: ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ರೈತ ಸಂಘ ಸೋಮವಾರ ಮನವಿ ಸಲ್ಲಿಸಿತು. 
ಕೃಷ್ಣ ಭಾಗ್ಯ ಜಲ ನಿಗಮ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಜಿಲ್ಲೆಯ ರೈತರು ಬಿತ್ತನೆ ಮಾಡಿರುವ ಭತ್ತ, ಹತ್ತಿ, ತೊಗರಿ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಹಾಳಾಗಿವೆ.
ರೈತರು ಬ್ಯಾಂಕ್, ಸಹಕಾರ ಸಂಘಗಳು ಹಾಗೂ ಖಾಸಗಿ ಸಾಲ ಮಾಡಿಕೊಂಡು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಬೆಳೆಗಳು ನಾಶವಾಗಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಕೂಡಲೇ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ರೈತರಿಗೆ ಎಕರೆ 35 ಸಾವಿರ ರೂ. ಪರಿಹಾರ ನೀಡಬೇಕು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಿ ಬಿತ್ತನೆ ಮಾಡಿರುವ ಬೆಳೆಗಳನ್ನು ಉಳಿಸಬೇಕು. 
ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ರೈತರ ಹಿತದೃಷ್ಟಿಯಿಂದ ವೈಜ್ಞಾನಿಕವಾಗಿ ನಿರ್ವಹಿಸಿ ನಿರಂತರ ನೀರು ಪೂರೈಕೆ ಮಾಡಬೇಕು. ತಾಲೂಕು ಆಡಳಿತ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ತಂಡ ರಚಿಸಿ ಗ್ರಾಮವಾರು ಬೆಳೆಹಾನಿ ಸಮೀಕ್ಷೆ ಕೈಗೊಳ್ಳಬೇಕು. ರೈತರ ಬೆಳೆ ಸಾಲ ವಸೂಲಿ ಸ್ಥಗಿತಗೊಳಿಸಿ, ಬಡ್ಡಿರಹಿತ ಹೊಸ ಕೃಷಿ ಸಾಲ ಹಾಗೂ ಅಗತ್ಯ ಕೃಷಿ ಇನ್‌ಪುಟ್ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಕೆ.ಗಿರಲಿಂಗಸ್ವಾಮಿ, ಮುಖಂಡರಾದ ದುರ್ಗಣ್ಣ ಗಲಗ, ಸಿದ್ಲಿಂಗಪ್ಪ, ಶಫೀಕ್ ಪಾಷಾ, ಮಲ್ಲಪ್ಪ ಮುಂಡರಗಿ, ಕೃಷ್ಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net