ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾ.11 ರಂದು ರಾಯಚೂರು ಬಂದ್

M.VEERUPAKHI
M.VEERUPAKHI
Published on
ರಾಯಚೂರು ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ 56 ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿರುವದನ್ನು ವಿರೋಧಿಸಿ ಮಾ.11 ರಂದು ರಾಯಚೂರು ಬಂದ್ ಮಾಡಲಾಗುತ್ತದೆಂದು ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಸಂಚಾಲಕ ಎಂ.ವಿರೂಪಾಕ್ಷಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಅಧೀನ ಕಾರ್ಯದರ್ಶಿಗಳ ಒತ್ತಡಕ್ಕೆ ಮಣಿದು ಮಾದಿಗ ಸಮಾಜಕ್ಕೆ ಮರಣ ಶಾಸನವಾಗುವ ರೀತಿಯಲ್ಲಿ ಹಳೆ ಮೀಸಲಾತಿಯಲ್ಲಿಯೇ 56 ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಲು ಸುಪ್ರಿಂಕೋರ್ಟ್ ನಿರ್ದೇಶನ ಮೇರೆಗೆ ಮೀಸಲು ಹಂಚಿಕೆ ಕಾಯ್ದೆ ರೂಪಿಸಿ ರಾಜ್ಯಪಾಲರ ಅನುಮತಿಯೂ ದೊರೆತಿದೆ. ಆದರೆ ಹೈಕೋರ್ಟ್‌ನಲ್ಲಿರುವ ಪ್ರಕರಣದಲ್ಲಿ ಶೇ.50 ಮೀಸಲು ಹೆಚ್ಚಳವಾಗದಂತೆ ಮಾತ್ರ ನಿರ್ದೇಶಿಸಿದೆ ಹೊರತು ಮೀಸಲು ಹಂಚಿಕೆ ಮಾಡಲ ನಿರ್ಬಂಧಿಸಿಲ್ಲ. ಕಳೆದ 30 ವರ್ಷಗಳಿಂದ ಒಳ ಮೀಸಲು ಜಾರಿಗೆ ಆಗ್ರಹಿಸಿ ಹೋರಾಟ ನಡೆದಿದೆ. ಚುನಾವಣಾ ಪೂರ್ವದಲ್ಲಿ ಮೀಸಲು ಜಾರಿಗೊಳಿಸುವದಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಅದರೀಗ ಮೀಸಲು ಹಂಚಿಕೆ ಮಾಡದೇ ಸರ್ಕಾರಿ ನೇಮಕಾತಿಗೆಮುಂದಾಗಿರುವದು ಖಂಡನೀಯ. ಕೂಡಲೇ ಆದೇಶ ರದ್ದುಗೊಳಿಸಿ ಶೇ.15 ಮೀಸಲಿನಲ್ಲಿ ಪರಿಶಿಷ್ಟಜಾತಿಗಳ ಮೀಸಲು ಹಂಚಿಕೆ ಮಾಡಿ ನೇಮಕಾತಿ ನಡೆಸಬೇಕೆಂದು ಒತ್ತಾಯಿಸಿ ಬಂದ್ ಮಾಡಲು ನಿರ್ಧರ ಮಾಡಲಾಗಿದೆ ಎಂದರು.
ಜಿಲ್ಲಾ ಬಂದ್‌ಗೆ ಎಲ್ಲಾ ಒಳ ಮೀಸಲು ಹೋರಾಟ ಸಮಿತಿಗಳು ಬೆಂಬಲಿಸಿ ಭಾಗವಹಿಸಲಿವೆ.ಪದವೀಧರರು, ಯುವಕರು, ವಿವಿಧ ಸಂಘಟನೆಗಳು ಬೆಂಬಲಿಸಿ ಭಾಗವಹಿಸಲಿವೆ. ಜಿಲ್ಲೆಯ ಸರಿ ಸುಮಾರು 10 ಸಾವಿರ ಜನರ ಬಂದ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಂದು ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಜಮಾಗೊಂಡು ಪ್ರತಿಭಟನೆ ನಡೆಸಲಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಪಿ.ಯಲ್ಲಪ್ಪ, ರವೀಂದ್ರ ಜಲ್ದಾರ, ಆಂಜಿನೇಯ್ಯ ಕುರಬದೊಡ್ಡಿ, ಸುಭಾಷ ಭೀಮಣ್ಣ ಮಂಚಾಲ, ಮೌನೇಶ ಜಗ್ಲಿ, ನರಸಿಂಹಲು, ನರಸಪ್ಪ ಆಶಾಪುರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net