ಪೆಟ್ರೋಲ್ ವಿಚಾರಕ್ಕೆ ಜಗಳ : ಯುವಕರ ಮಧ್ಯೆ ಹೊಡೆದಾಟ

ಪೆಟ್ರೋಲ್ ವಿಚಾರಕ್ಕೆ ಜಗಳ ಅಡುತಿರುವುದು
ಪೆಟ್ರೋಲ್ ವಿಚಾರಕ್ಕೆ ಜಗಳ ಅಡುತಿರುವುದು
Published on

ರಾಯಚೂರು ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರದಲ್ಲಿ ಜಗಳ ತೆಗೆದು ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದು ಓರ್ವ ಯುವಕನಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪೇಟ್ರೋಲ್ ಬಂಕ್ ಒಂದರಲ್ಲಿ ಯುವಕರು ಪೆಟ್ರೋಲ್ ಹಾಕಿಸಿಕೊಳ್ಳಲು ನಾ ಮುಂದು ತಾ ಮುಂದು ಅಂತ ಶುರುವಾದ ಜಗಳ ಹೊಡೆದಾಟದ ಹಂತಕ್ಕೆ ತಿರುಗಿದೆ. ಗುಂಪು ಘರ್ಷಣೆಯಲ್ಲಿ ಓರ್ವ ಯುವಕನಿಗೆ ನೀರಿನೋರು ದೊಡ್ಡಿ ಗ್ರಾಮದ ಇಬ್ಬರು ಯುವಕರಿಂದ ಹಲ್ಲೆ ಮಾಡಿದ್ದಾರೆ.

ಸದ್ಯ ಯುವಕರು ಹೊಡೆದಾಡಿಕೊಂಡ ದೃಶ್ಯ ಪೆಟ್ರೋಲ್ ಬಂಕ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net