ಚಂದವ್ವ ಬೂದೆಪ್ಪ (45) ಮೃತೆ. ಕುಮಾರ್ ಬೂದೆಪ್ಪ ಕೊಲೆ ಮಾಡಿದ ಪುತ್ರ. ಸೋಮವಾರ ಸಂಜೆ ಕುಡಿದು ಮನೆಗೆ ಬಂದ ಕುಮಾರ್, ತಾಯಿ ಹಾಗೂ ತಮ್ಮ ಸಂತೋಷ್ ಜತೆ ಜಗಳ ತೆಗೆದಿದ್ದಾನೆ. ಈ ವೇಳೆ ಕುಮಾರ್ ತಳ್ಳಿದ್ದರಿಂದ ತಾಯಿ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.