ಪಲ್ಸ್ ಪೋಲಿಯೋ ಜಿಲ್ಲೆಯಲ್ಲಿ ಶೇ.100.01 ರಷ್ಟು ಸಾಧನೆ

DHO DR.SURENDRABABU
DHO DR.SURENDRABABU
Published on
ರಾಯಚೂರು ರಾಷ್ಟೀಯ ಪಲ್ಸ್ ಪೋಲಿಯೋ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಡಿ.2 ರವರೆಗೆ ಒಟ್ಟು 2,60, 002 ಮಕ್ಕಳನ್ನು ತಲುಪಿ ಶೇ.100.02ರಷ್ಟು ಸಾಧನೆ ಮಾಡಲಾಗಿದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ತಿಳಿಸಿದ್ದಾರೆ.
ಗುರಿ ಸಾಧನೆಗಾಗಿ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕುವ ದಿಶೆಯಲ್ಲಿ 601 ಕ್ಲಿಷ್ಟಕರವಾದ ವಸತಿ ಪ್ರದೇಶಗಳನ್ನು, 203 ವಲಸೆ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿತ್ತು.
ಜಿಲ್ಲೆಯಾದ್ಯಂತ 1132 ಲಸಿಕಾ ಬೂತ್‌ಗಳು 1,133 ಮನೆ ಭೇಟಿ ನೀಡುವ ತಂಡಗಳು, ಹೆಚ್ಚು ಜನಸೇರುವ ಹಾಗೂ ಸಂತೆ-ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಇತರೆ ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಲಸಿಕೆ ಹಾಕಲು 53 ತಂಡಗಳು ಮತ್ತು ವಲಸೆ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ, ಕುರಿಹಟ್ಟಿ ಮುಂತಾದ ಸ್ಥಳಗಳಲ್ಲಿ ಲಸಿಕೆ ಹಾಕಲು 33 ಸಂಚಾರಿ ತಂಡಗಳ ಮೂಲಕ ಸಾಧನೆ ಮಾಡಲಾಗಿದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net