ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ

ಮಸ್ಕಿಯಲ್ಲಿ ಕುಡಿವ ನೀರಿನ ಕೆರೆಯನ್ನು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ವೀಕ್ಷಿಸಿದರು. ಸದಸ್ಯರಾದ ಚೇತನ್ ಪಾಟೀಲ್, ದೊಡ್ಡ ಕರಿಯಪ್ಪ, ರವಿಗೌಡ ಪಾಟೀಲ್, ಮಲ್ಲಿಕಾರ್ಜುನ ಬ್ಯಾಳಿ, ಭರತ, ಸಂತೋಷ, ವ್ಯವಸ್ಥಾಪಕ ಸತ್ಯನಾರಾಯಣ ಇದ್ದರು.
ಮಸ್ಕಿಯಲ್ಲಿ ಕುಡಿವ ನೀರಿನ ಕೆರೆಯನ್ನು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ವೀಕ್ಷಿಸಿದರು. ಸದಸ್ಯರಾದ ಚೇತನ್ ಪಾಟೀಲ್, ದೊಡ್ಡ ಕರಿಯಪ್ಪ, ರವಿಗೌಡ ಪಾಟೀಲ್, ಮಲ್ಲಿಕಾರ್ಜುನ ಬ್ಯಾಳಿ, ಭರತ, ಸಂತೋಷ, ವ್ಯವಸ್ಥಾಪಕ ಸತ್ಯನಾರಾಯಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಕೋರಿಕೆ
  • ಮಸ್ಕಿ ಕೆರೆ ವಿಕ್ಷಣೆ
ಮಸ್ಕಿ: ಕುಡಿವ ನೀರಿನ ಕೆರೆ ಖಾಲಿಯಾಗಿದ್ದು, ಸಾರ್ವಜನಿಕರು ಹಿತಮಿತವಾಗಿ ಬಳಸಬೇಕು ಎಂದು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಹೇಳಿದರು.
ಪುರಸಭೆ ಸದಸ್ಯರು ಹಾಗೂ ವ್ಯವಸ್ಥಾಪಕ ಸತ್ಯನಾರಾಯಣ ಅವರ ಜತೆಗೂಡಿ ಕೆರೆ ವಿಕ್ಷಣೆ ಮಾಡಿ ಮಾತನಾಡಿದರು. ಸಕಾಲಕ್ಕೆ ಮಳೆ ಬಾರದಿರುವುದರಿಂದ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ. ತುಂಗಭದ್ರಾ ಎಡದಂಡೆ ಕಾಲುವೆಗೆ ಜು.10ರಂದು ನೀರು ಬಿಡುವ ಸಾಧ್ಯತೆ ಇದೆ. ಈಗ ಪಟ್ಟಣದಲ್ಲಿ 10 ದಿನಕ್ಕೊಮ್ಮೆ ಕುಡಿವ ನೀರು ಬಿಡುತ್ತಿದ್ದು, ಕೆರೆಯಲ್ಲಿ ಡೆಡ್ ಸ್ಟೋರೇಜ್‌ಗಿಂತ 3 ಅಡಿ ನೀರು ಇರುವುದರಿಂದ ಇನ್ನೂ ಎರಡು ಬಾರಿ ಬಿಡಲಾಗುತ್ತದೆ.
ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿದರೆ ಕುಡಿವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಇಲ್ಲದಿದ್ದರೆ ಬೋರ್‌ವೆಲ್ ನೀರಿನ ಮೇಲೆ ಅವಲಂಬಿಸಬೇಕಾಗಿದೆ. ಪಟ್ಟಣದಲ್ಲಿ 90 ಬೋರ್‌ವೆಲ್ ಪೈಕಿ 88 ಚಾಲ್ತಿಯಲ್ಲಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕೆಂದು ಕೋರಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಪಾಟೀಲ, ಸದಸ್ಯರಾದ ದೊಡ್ಡ ಕರಿಯಪ್ಪ, ರವಿಗೌಡ ಪಾಟೀಲ್, ಮಲ್ಲಿಕಾರ್ಜುನ ಬ್ಯಾಳಿ, ಭರತ, ಸಂತೋಷ, ನೌಕರ ಶಿವಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net