ಸಿಂಧನೂರಿನ ತಾಪಂ ಕಚೇರಿ ಮುಂದೆ ಪ್ರಾಂತ ರೈತ ಸಂಘದ ತಾಲೂಕು ಘಟಕ ಶನಿವಾರ ಧರಣಿ ನಡೆಸಿತು. ಸಂಘದ ತಾಲೂಕಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು, ಕೂಲಿ ಕಾರ್ಮಿಕರಾದ ಪಾರ್ವತಿ ಮುಳ್ಳೂರು, ಅನಸೂಯಾ, ಪ್ರಭಾವತಿ, ಹುಲಿಗೆಮ್ಮ ಇತರರಿದ್ದರು.
ಸಿಂಧನೂರು: ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆೆಲಸ ನೀಡಬೇಕೆಂದು ಒತ್ತಾಯಿಸಿ ಪ್ರಾಂತ ರೈತ ಸಂಘದ ತಾಲೂಕು ಘಟಕ ಶನಿವಾರ ತಾಪಂ ಕಚೇರಿ ಮುಂದೆ ಧರಣಿ ನಡೆಸಿತು.
ಪಂಚಾಯಿತಿಗಳಲ್ಲಿ ಮಾ.31ಕ್ಕೆ ಉದ್ಯೋಗ ಖಾತ್ರಿ ಬಂದ್ ಮಾಡಲಾಗುತ್ತಿದೆ. ಕಳೆದ 54 ದಿನಗಳಿಂದ ಬೂತಲದಿನ್ನಿ ಹಾಗೂ ಪಗಡದಿನ್ನಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ವಿಚಾರಿಸಿದರೂ ಹಾರಿಕೆ ಉತ್ತರ ನೀಡಿ ಕಳಿಸುತ್ತಿದ್ದಾರೆ. ಇದರಿಂದ ಕೂಲಿಕಾರ್ಮಿಕರು ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಇನ್ನುಳಿದ 24 ದಿನಗಳಲ್ಲಿ 14 ದಿನವಾದರೂ ಉದ್ಯೋಗ ಖಾತ್ರಿ ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು, ಕೂಲಿ ಕಾರ್ಮಿಕರಾದ ಪ್ರಮೀಳಮ್ಮ, ಶರಣಮ್ಮ, ದೇವಮ್ಮ, ಮುದಿಯಪ್ಪ, ಹನುಮಂತಪ್ಪ, ಅನ್ನರಾವ, ಲಿಂಗನಗೌಡ, ಶಂಕರಪ್ಪ, ಚಿನ್ನು, ಗೋಪಾಲ, ಗಿರಿಜಮ್ಮ, ಶ್ರುತಿ ಇದ್ದರು.