ಸಮೀಪದ ಹುಸೇನಪುರ, ಸೈದಪುರ, ಕಡ್ಡೋಣಿ, ತೊಪ್ಪಲದೊಡ್ಡಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಳಗ್ಗೆ 8ಕ್ಕೆ ಬಸ್‌ಗೆ ಬರುತ್ತಾರೆ. ಪರೀಕ್ಷೆ ಮುಗಿದ ನಂತರ ಹುಸೇನಪುರದ ವಿದ್ಯಾರ್ಥಿಗಳು 4ಕಿಮೀ, ಕಡ್ಡೋಣಿಯ ವಿದ್ಯಾರ್ಥಿಗಳು 6 ಕಿಮೀ, ತೊಪ್ಪಲದೊಡ್ಡಿ ವಿದ್ಯಾರ್ಥಿಗಳು 8 ಕಿಮೀ ಮತ್ತು ಸೈದಪುರ 7 ಕಿಮೀ ದೂರದ ವಿದ್ಯಾರ್ಥಿಗಳು ಸಂಜೆ 6ಗಂಟೆ ವರೆಗೂ ಕಾಯದೆ ನಡೆದು ಹೋಗುತ್ತಿದ್ದಾರೆ.