ನಿವೇಶನ-ವಸತಿ ಸೌಲಭ್ಯ ಕಲ್ಪಿಸಿ

ಸಿಂಧನೂರು ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿಗೆ ಹಮಾಲರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಸಂಘದ ಅಧ್ಯಕ್ಷ ಬಾಷುಮಿಯಾ, ಕಾರ್ಯದರ್ಶಿ ಗಂಗಪ್ಪ, ಉಪಾಧ್ಯಕ್ಷ ಹನುಮಂತಪ್ಪ ಹಂಚಿನಾಳ ಇತರರಿದ್ದರು.
ಸಿಂಧನೂರು ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿಗೆ ಹಮಾಲರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಸಂಘದ ಅಧ್ಯಕ್ಷ ಬಾಷುಮಿಯಾ, ಕಾರ್ಯದರ್ಶಿ ಗಂಗಪ್ಪ, ಉಪಾಧ್ಯಕ್ಷ ಹನುಮಂತಪ್ಪ ಹಂಚಿನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ
  • ಕೊಳೆಗೇರಿ
  • ನಿವಾಸಿಗಳು
ಸಿಂಧನೂರು: ನಗರದ ವಿವಿಧ ವಾರ್ಡ್‌ಗಳಲ್ಲಿ ವಾಸಿಸುತ್ತಿರುವ ಹಮಾಲರು, ಆಸ್ಪತ್ರೆ, ಶಾಲಾ-ಕಾಲೇಜು ಮತ್ತು ಮನೆ ಕೆಲಸ ಮಾಡುವ ಮಹಿಳೆಯರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಹಮಾಲರ ಸಂಘದಿಂದ ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಕಳೆದ ಹತ್ತು ವರ್ಷಗಳಿಂದ ಜಿಲ್ಲಾಧಿಕಾರಿ, ನಗರಸಭೆ ಆಡಳಿತ ಪೌರಾಯುಕ್ತರು ಮತ್ತು ಶಾಸಕರಿಗೆ ಹತ್ತಾರು ಬಾರಿ ಮನವಿ ಸಲ್ಲಿಸುತ್ತ ಬಂದಿದ್ದರೂ ಯಾರೂ ಸ್ಪಂದಿಸಿಲ್ಲ. ಇದರಿಂದ ಬೇಸತ್ತಿರುವ ವಿವಿಧ ಕೊಳೆಗೇರಿ ನಿವಾಸಿಗಳು ಉಗ್ರ ಹೋರಾಟಕ್ಕೆ ಸಿದ್ಧರಾಗಿದ್ದಾರೆ.
ಕಾರಣ ಇನ್ನೊಂದು ವಾರದೊಳಗೆ ನಿವೇಶನ ಗುರುತಿಸಿ ಕೊಡಬೇಕು. ರಾಜೀವಗಾಂಧಿ ವಸತಿ ಯೋಜನೆಯಲ್ಲಿ ಸುಕಾಲಪೇಟೆ, ಏಳುರಾಗಿ ಕ್ಯಾಂಪ್ ಮತ್ತು ಬಪ್ಪೂರ ರಸ್ತೆಯಲ್ಲಿ ಭೂಮಿ ಖರೀದಿಸಿ ಹಲವಾರು ವರ್ಷಗಳೇ ಉರುಳಿವೆ. ಆದರೆ ನಿವೇಶನ ಹಂಚುವಲ್ಲಿ ಮೀನಮೇಷ ಮಾಡುತ್ತಿರುವ ಉದ್ದೇಶ ತಿಳಿಸಬೇಕೆಂದು ಒತ್ತಾಯಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ಶಾಂತನಾಗನಗೌಡ, ಗಂಗಮ್ಮ, ಲಕ್ಷ್ಮೀ ಪಾಟೀಲ್, ಬಲರಾಮ, ಪ್ರಕಾಶ, ಮೌಲಪ್ಪ, ಬಸವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net