ಕಾರ್ಮಿಕರ ಮಕ್ಕಳಿಗೆ ಶಿಷ್ಯ ವೇತನ ನೀಡಿ

ಸಿಂಧನೂರಿನಲ್ಲಿ ಎಪಿಎಂಸಿ ಕಾರ್ಯದರ್ಶಿ ರವಿಚಂದ್ರಗೆ ಹಮಾಲರ ಸಂಘದ ತಾಲೂಕು ಘಟಕ ಮನವಿ ಸಲ್ಲಿಸಿತು. ಸಂಘದ ತಾಲೂಕು ಅಧ್ಯಕ್ಷ ಬಾಷುಮಿಯಾ, ಉಪಾಧ್ಯಕ್ಷರಾದ ಹನುಮಂತಪ್ಪ ಹಂಚಿನಾಳ, ಮುಕ್ತುಂಸಾಬ್, ಕಾರ್ಯದರ್ಶಿ ಗಂಗಣ್ಣ ಇದ್ದರು.
ಸಿಂಧನೂರಿನಲ್ಲಿ ಎಪಿಎಂಸಿ ಕಾರ್ಯದರ್ಶಿ ರವಿಚಂದ್ರಗೆ ಹಮಾಲರ ಸಂಘದ ತಾಲೂಕು ಘಟಕ ಮನವಿ ಸಲ್ಲಿಸಿತು. ಸಂಘದ ತಾಲೂಕು ಅಧ್ಯಕ್ಷ ಬಾಷುಮಿಯಾ, ಉಪಾಧ್ಯಕ್ಷರಾದ ಹನುಮಂತಪ್ಪ ಹಂಚಿನಾಳ, ಮುಕ್ತುಂಸಾಬ್, ಕಾರ್ಯದರ್ಶಿ ಗಂಗಣ್ಣ ಇದ್ದರು.
Published on
ಸಿಂಧನೂರು: ಹಮಾಲಿ ಕಾರ್ಮಿಕರಿಗೆ ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮಾಲರ ಸಂಘದ ತಾಲೂಕು ಘಟಕ ಬುಧವಾರ ನಗರದ ಎಪಿಎಂಸಿ ಕಾರ್ಯದರ್ಶಿ ರವಿಚಂದ್ರಗೆ ಮನವಿ ಸಲ್ಲಿಸಿತು.
ನೋಂದಾಯಿತ ಲೋಡಿಂಗ್, ಅನ್‌ಲೋಡಿಂಗ್ ಇತರ ಎಲ್ಲ ಹಮಾಲರಿಗೆ ಸ್ವಾಭಾವಿಕ ಮರಣಕ್ಕೆ 5 ಲಕ್ಷ ರೂ., ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ರೂ. ನೀಡಬೇಕು. ಕೆಲಸ ಮಾಡುವಾಗ ಕೈ, ಕಾಲು ಕಳೆದುಕೊಂಡು ಅಂಗವಿಕಲರಾದರೆ 10 ಲಕ್ಷ ರೂ. ಪರಿಹಾರ ಕೊಡುವುದಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿಗಳ ಮೂಲಕ ವಿಮಾ ಯೋಜನೆಗೆ ಒಳಪಡಿಸಿ ಹಮಾಲರ ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಮಕ್ಕಳಿಗೆ ಶಿಷ್ಯ ವೇತನ, ವಿವಾಹಕ್ಕೆ 50 ಸಾವಿರ ರೂ. ಸಹಾಯಧನ, ಮೊದಲ ಮತ್ತು ಎರಡನೇ ಹೆರಿಗೆಗೆ ಭತ್ಯೆ ಹಾಗೂ ಆಸ್ಪತ್ರೆಯ ವೆಚ್ಚ ನೀಡಬೇಕು ಎಂದು ಒತ್ತಾಯಿಸಿದರು.
ಹಮಾಲ ಕಾರ್ಮಿಕರ ಕುಟುಂಬದವರು ಕಾಯಿಲೆಗೆ ತುತ್ತಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಖರ್ಚನ್ನು ಸರ್ಕಾರವೇ ಭರಿಸಬೇಕು. ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟದ (ಜೆಸಿಟಿಯು) ಕರೆಯ ಮೇರೆಗೆ ಫೆ.12ರಂದು ನಡೆಯುವ ಮುಷ್ಕರ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು, ದಲ್ಲಾಳಿಗಳು ಸ್ವಯಂಪ್ರೇರಣೆಯಿಂದ ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಮುಷ್ಕರಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಹಮಾಲರ ಸಂಘದ ತಾಲೂಕು ಅಧ್ಯಕ್ಷ ಬಾಷುಮಿಯಾ, ಉಪಾಧ್ಯಕ್ಷರಾದ ಹನುಮಂತಪ್ಪ ಹಂಚಿನಾಳ, ಮುಕ್ತುಂಸಾಬ್, ಕಾರ್ಯದರ್ಶಿ ಗಂಗಣ್ಣ, ಸಂಘಟನಾ ಕಾರ್ಯದರ್ಶಿ ಅಮರೇಶ ನಾಯಕ, ಖಜಾಂಚಿ ಶಿವಪ್ಪ, ಸದಸ್ಯ ನಾಗರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net