ರೈತರಿಗೆ ರಸ್ತೆ ಸೌಲಭ್ಯ ಕಲ್ಪಿಸಿ

ಮಾನ್ವಿ ತಹಸಿಲ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಕರೀಂಸಾಬ್, ಫಕೀರಮ್ಮ, ರಾಚಮ್ಮ, ಹನುಮಂತ ಇತರರಿದ್ದರು.
ಮಾನ್ವಿ ತಹಸಿಲ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಕರೀಂಸಾಬ್, ಫಕೀರಮ್ಮ, ರಾಚಮ್ಮ, ಹನುಮಂತ ಇತರರಿದ್ದರು.
Published on
ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ರಸ್ತೆ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಹನುಮೇಶ ನಾಯಕ ಮಾತನಾಡಿ, ಭೂರಹಿತ ಕೃಷಿ ಕಾರ್ಮಿಕರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮ ರಾಯಚೂರು ಅವರು ಸರ್ವೇ ನಂ. 19/*/1 ರಲ್ಲಿ ಭೂಮಿಯನ್ನು ಖರೀದಿಸಿ 2016-17 ರಲ್ಲಿ ಫಲಾನುಭವಿಗಳಿಗೆ ಜಮೀನುಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ರೈತರು ಜಮೀನಿಗೆ ಹೋಗುವುದಕ್ಕೆ ರಸ್ತೆ ಇಲ್ಲದೆ ತೊಂದರೆಯಾಗುತ್ತಿದೆ. ತಾಲೂಕು ಆಡಳಿತ ರಸ್ತೆ ಸೌಕರ್ಯ ಕಲ್ಪಿಸಿಕೊಡಬೇಕು. ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಉಪಾಧ್ಯಕ್ಷರಾದ ದಾಹುದ್, ಬಜ್ಜಯ್ಯನಾಯಕ, ಕಾರ್ಯದರ್ಶಿ ವೆಂಕಟೇಶನಾಯಕ, ಪ್ರಮುಖರಾದ ಸೈಫೀಲ್, ಮೈಬೂಬ್, ಚಾಂದ್‌ಪಾಷಾ, ಶಿವಶಂಕರ, ಕರೀಂಸಾಬ್, ಫಕೀರಮ್ಮ, ರಾಚಮ್ಮ, ಹನುಮಂತ, ದೇವಮ್ಮ, ಲಕ್ಷ್ಮೀ, ಬಸವರಾಜ, ಮಲ್ಲಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net