ನವಗ್ರಾಮದಲ್ಲಿ ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಿ

ಮಸ್ಕಿಯಲ್ಲಿ ಪುರಸಭೆ ಅಧ್ಯಕ್ಷ ಸುರೇಶ ಹರಸೂರುಗೆ ಕರವೇ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ದುರ್ಗರಾಜ ವಟಗಲ್, ನೂರ್ ಅಹ್ಮದ್, ಸುರೇಶ, ಮೌನೇಶ, ಅಯ್ಯಪ್ಪ, ಮುದಿಯಪ್ಪ, ಬಸವರಾಜ, ಅಭಿಷೇಕ ಇತರರಿದ್ದರು.
ಮಸ್ಕಿಯಲ್ಲಿ ಪುರಸಭೆ ಅಧ್ಯಕ್ಷ ಸುರೇಶ ಹರಸೂರುಗೆ ಕರವೇ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ದುರ್ಗರಾಜ ವಟಗಲ್, ನೂರ್ ಅಹ್ಮದ್, ಸುರೇಶ, ಮೌನೇಶ, ಅಯ್ಯಪ್ಪ, ಮುದಿಯಪ್ಪ, ಬಸವರಾಜ, ಅಭಿಷೇಕ ಇತರರಿದ್ದರು.
Published on
ಮಸ್ಕಿ: ಪಟ್ಟಣದ ಲಿಂಗಸುಗೂರು ರಸ್ತೆಯಲ್ಲಿ ನವಗ್ರಾಮ ವಸತಿ ಯೋಜನೆಯಡಿ ಆಯ್ಕೆಯಾದ ಪಟ್ಟಿಯನ್ನು ಮರು ಪರಿಶೀಲಿಸಿ ಬಡವರಿಗೆ ವಸತಿ ಸೌಲಭ್ಯ ಕೊಡಬೇಕು ಎಂದು ಒತ್ತಾಯಿಸಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಪುರಸಭೆ ಅಧ್ಯಕ್ಷ ಸುರೇಶ ಹರಸೂರುಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ದುರ್ಗರಾಜ ವಟಗಲ್ ಮಾತನಾಡಿ, ಈ ಹಿಂದೆ ಗ್ರಾಪಂ ಆಡಳಿತ ಇದ್ದಾಗ ಲಿಂಗಸುಗೂರು ರಸ್ತೆಯಲ್ಲಿ 6 ಎಕರೆ ಭೂಮಿ ಖರೀದಿಸಿ 150 ಜನರಿಗೆ ಹಕ್ಕುಪತ್ರ ವಿತರಸಿಲಾಗಿತ್ತು. 
ಮೂಲಸೌಕರ್ಯ ಒದಗಿಸದ ಕಾರಣ ಫಲಾನುಭವಿಗಳು ಅಲ್ಲಿಗೆ ಹೋಗಲಿಲ್ಲ. ಇದರಿಂದ ಮನೆಗಳು ಪಾಳು ಬಿದ್ದಿದ್ದವು. ಪುರಸಭೆ ಆಡಳಿತ ಮಂಡಳಿ ಮನೆ ತೆರವುಗೊಳಿಸಿ ಮತ್ತೊಮ್ಮೆ ನಿವೇಶನ ಗುರುತಿಸಿ ಹದ್ದುಬಸ್ತು ಮಾಡಿ ಈಗ 236 ಜನರಿಗೆ ಪಟ್ಟಾ ನೀಡಲು ಮುಂದಾಗಿದೆ. 
ಆದರೆ, 18-19 ವರ್ಷದ ಹಿಂದೆ ಗುರುತಿಸಿದ ಫಲಾನುಭವಿಗಳಲ್ಲಿ ಕೆಲವರು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಆರ್ಥಿಕವಾಗಿ ಅನುಕೂಲಸ್ಥರಿದ್ದಾರೆ. ಆದ್ದರಿಂದ ಫಲಾನುಭವಿಗಳ ಪಟ್ಟಿ ಮರು ಪರಿಶೀಲಿಸಬೇಕು. ನಿಜವಾದ ನಿರಾಶ್ರಿತರಿಗೆ ಮನೆ ನೀಡಬೇಕೆಂದು ಆಗ್ರಹಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net