ಸಿಂಧನೂರು ತಾಲೂಕು ಮಾಡಸಿರವಾರ ಗ್ರಾಪಂ ಪಿಡಿಒಸರಸ್ವತಿಗೆ ಗೋಮರ್ಸಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಕೆಆರ್‌ಎಸ್ ಪಕ್ಷದ ಸಂಚಾಲಕ ನಿರುಪಾದಿ ಕೆ. ಗೋಮರ್ಸಿ, ಪ್ರಮುಖರಾದ ಅಪ್ಪಯ್ಯ, ಶಂಶುದ್ದೀನ್, ಉಮೇಶ್ ಉಪ್ಪಾರ, ವಿರುಪಣ್ಣ ಇತರರಿದ್ದರು.
ಸಿಂಧನೂರು: ತಾಲೂಕಿನ ಮಾಡಸಿರವಾರ ಗ್ರಾಪಂ ವ್ಯಾಪ್ತಿಯ ಗೋಮರ್ಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪಿಡಿಒ ಸರಸ್ವತಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಶೌಚಗೃಹಗಳ ದುರಸ್ತಿ, ಶುದ್ಧ ಕುಡಿವ ನೀರಿನ ವ್ಯವಸ್ಥೆ, ಶಾಲಾ ಆವರಣದ ಸ್ವಚ್ಛತೆ, ಆಟದ ಮೈದಾನದ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮೂಲಸೌಕರ್ಯವೂ ಮುಖ್ಯವಾಗಿದ್ದು, ಗೋಮರ್ಸಿ ಶಾಲೆಯ ಅಭಿವೃದ್ಧಿಗೆ ಗ್ರಾಪಂ ಹಾಗೂ ಸಂಬಂಧಿಸಿದ ಇಲಾಖೆಗಳು ವಿಶೇಷ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಕೆಆರ್‌ಎಸ್ ಪಕ್ಷದ ಸಂಚಾಲಕ ನಿರುಪಾದಿ ಕೆ. ಗೋಮರ್ಸಿ, ಪ್ರಮುಖರಾದ ಅಪ್ಪಯ್ಯ, ಶಂಶುದ್ದೀನ್, ಉಮೇಶ್ ಉಪ್ಪಾರ, ವಿರುಪಣ್ಣ, ಅಜ್ಮೀರ್‌ಸಾಬ್, ನಾಗಪ್ಪ, ವೀರೇಶ ಇದ್ದರು.