ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಿ

ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮಾದಿಗ ಸಮಾಜ, ದಲಿತ ಒಕ್ಕೂಟ ಸಮಿತಿ ಮನವಿ ಸಲ್ಲಿಸಿತು.
ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮಾದಿಗ ಸಮಾಜ, ದಲಿತ ಒಕ್ಕೂಟ ಸಮಿತಿ ಮನವಿ ಸಲ್ಲಿಸಿತು.
Published on
ಲಿಂಗಸುಗೂರು: ಅಪಘಾತದಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿನಿ ಸುಮಂಗಲಾ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಾದಿಗ ಸಮಾಜ, ದಲಿತ ಒಕ್ಕೂಟ ಸಮಿತಿಯಿಂದ ಮಂಗಳವಾರ ಎಸಿ ಬಸವಣೆಪ್ಪ ಕಲಶೆಟ್ಟಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. 
ಕಡು ಬಡತನದಲ್ಲಿ ಎಂಬಿಬಿಎಸ್ ಸೀಟು ಪಡೆದ ಸುಮಂಗಲಾ ಬೆಂಗಳೂರಿಗೆ ಹೊರಟ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಶಿರಾ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗಳನ್ನು ಕಳೆದುಕೊಂಡ ತಾಯಿ, ಅಕ್ಕ-ತಂಗಿ ಇದ್ದು, ಸರ್ಕಾರ ನೆರವಿಗೆ ಬರಬೇಕಿದೆ. ಸರ್ಕಾರ ಅಥವಾ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಗರಿಷ್ಠ ಮಟ್ಟದ ಆರ್ಥಿಕ ಪರಿಹಾರ ಮಂಜೂರು ಮಾಡಬೇಕು. ಕುಟುಂಬದ ಒಬ್ಬರಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಒದಗಿಸಬೇಕೆಂದು ಒತ್ತಾಯಿಸಿದರು. 
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಪ್ರಮುಖರಾದ ಶರಣಪ್ಪ ಕಟ್ಟಿಮನಿ, ದುರುಗಪ್ಪ ಹಿರೇಮನಿ, ಮೋಹನ ಗೋಸ್ಲೆ, ನಾಗರಾಜ ಯರಡೋಣ, ರವಿಕುಮಾರ ಕಟ್ಟಿಮನಿ, ಹುಸೇನಪ್ಪ ಕಳ್ಳಿಲಿಂಗಸುಗೂರು, ದುರಗಪ್ಪ ಡಬ್ಬೇರಮಡು, ಅಮರೇಶ ಕರಡಕಲ್ಲ, ಅಶೋಕ ಪಗಡದಿನ್ನಿ, ಪ್ರಕಾಶ ಬಡಿಗೇರ, ಹನಮಂತ, ಪಿಡ್ಡಪ್ಪ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net