ಎಜುಕೇಷನ್ ಲೇಔಟ್‌ಗೆ ಬಸ್ ಸೌಲಭ್ಯ ಕಲ್ಪಿಸಿ

ದೇವದುರ್ಗದ ಎಜುಕೇಷನ್ ಲೇಔಟ್‌ನಲ್ಲಿ ಬಸ್ ನಿಲುಗಡೆಗೆ ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ, ಪದಾಧಿಕಾರಿಗಳಾದ ಬಾಷಾ ಶ್ಯಾಣೇರ್, ಸಂತೋಷ ತ್ಯಾಪ್ಲಿ, ದಿಲ್‌ಶಾದ್, ಶಬ್ಬೀರ್ ಜಾಲಹಳ್ಳಿ, ಯೂಸೂಫ್ ಗ್ವಾಡಕರ್, ಬಾಬು ಶ್ಯಾಣೇರ್ ಇತರರಿದ್ದರು.
ದೇವದುರ್ಗದ ಎಜುಕೇಷನ್ ಲೇಔಟ್‌ನಲ್ಲಿ ಬಸ್ ನಿಲುಗಡೆಗೆ ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ, ಪದಾಧಿಕಾರಿಗಳಾದ ಬಾಷಾ ಶ್ಯಾಣೇರ್, ಸಂತೋಷ ತ್ಯಾಪ್ಲಿ, ದಿಲ್‌ಶಾದ್, ಶಬ್ಬೀರ್ ಜಾಲಹಳ್ಳಿ, ಯೂಸೂಫ್ ಗ್ವಾಡಕರ್, ಬಾಬು ಶ್ಯಾಣೇರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಂದ ಒತ್ತಾಯ
  • ದೇವದುರ್ಗ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ
ದೇವದುರ್ಗ: ವಿದ್ಯಾಗಿರಿ ಪ್ರದೇಶದಲ್ಲಿನ ಎಜುಕೇಷನ್ ಲೇಔಟ್‌ನಲ್ಲಿ ಸರ್ಕಾರದ ಎಲ್ಲ ಬಸ್‌ಗಳನ್ನು ನಿಲುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಲೇಔಟ್‌ನಲ್ಲಿ ಎಂಟಕ್ಕೂ ಹೆಚ್ಚು ವಿವಿಧ ಇಲಾಖೆಗಳ ಹಾಸ್ಟೆಲ್‌ಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿದ್ದು, ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪಟ್ಟಣದಿಂದ ಸುಮಾರು ಮೂರು ಕಿಮೀ ದೂರವಿರುವ ಈ ಸ್ಥಳದಲ್ಲಿ ಬಸ್‌ಗಳು ನಿಲ್ಲದ ಕಾರಣ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ತೆರಳಬೇಕಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಎಲ್ಲ ಬಸ್‌ಗಳು ನಿಲುಗಡೆ ಮಾಡಬೇಕು. ಬೆಳಗ್ಗೆ, ಮಧ್ಯಾಹ್ನ, ಸಂಜೆ ಲೇಔಟ್‌ಗೆ ವಿಶೇಷ ಬಸ್ ಬಿಡಬೇಕು. ಎರಡು ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೌಚಗೃಹ ನಿರ್ಮಿಸಬೇಕು. ರಾಜ್ಯ ಹೆದ್ದಾರಿಯಿಂದ ವಿದ್ಯಾರ್ಥಿ ವಸತಿ ನಿಲಯಗಳವರೆಗೆ ಬೀದಿದೀಪ ಅಳವಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಸಂಸ್ಥೆ ಡಿಪೋ ಮ್ಯಾನೇಜರ್ ರಾಜಶೇಖರ ಭೇಟಿ ನೀಡಿ ಬಸ್ ನಿಲುಗಡೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ, ತಾಲೂಕು ಅಧ್ಯಕ್ಷ ಬಾಷಾ ಶ್ಯಾಣೇರ್, ಕಾರ್ಯದರ್ಶಿ ಸಂತೋಷ ತ್ಯಾಪ್ಲಿ, ಖಜಾಂಚಿ ದಿಲ್‌ಶಾದ್, ಪ್ರಮುಖರಾದ ಶಬ್ಬೀರ್ ಜಾಲಹಳ್ಳಿ, ಯೂಸೂಫ್ ಗ್ವಾಡಕರ್, ಬಾಬು ಶ್ಯಾಣೇರ್, ಅಭಿಷೇಕ, ಶಿವು, ನಿಂಗಯ್ಯ ಸುಣ್ಣದಕಲ್, ಯಲ್ಲಪ್ಪ ಸುಣ್ಣದಕಲ್, ಶಿವರಾಜ ಮುಂಡರಗಿ, ಲಕ್ಷ್ಮಣ ಪರಪುರ, ರಂಗನಾಥ, ಹನುಮಂತ, ನಾಗರಾಜ ಪರಪುರ, ವಿದ್ಯಾರ್ಥಿಗಳಾದ ಅನೀತಾ, ಶಿಲ್ಪಾ, ರೇಷ್ಮಾ, ಸುನೀತಾ, ಹನುಮಂತ ಗಲಗ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net