ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ದೇವದುರ್ಗದಲ್ಲಿ ಬಸ್ ಡಿಪೋ ವ್ಯವಸ್ಥಾಪಕ ರಾಮನಗೌಡಗೆ ಎಸ್‌ಎಫ್‌ಐ ಎಸ್‌ಎಫ್‌ಐ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಸಂತೋಷ್ ತ್ಯಾಪ್ಲಿ, ಬಾಬು, ಬಾಾಷಾಸಾಬ್, ಹನುಮಂತ ಮಡಿವಾಳ, ರಾಜು ನಾಯಕ, ನಿಂಗಯ್ಯ ಸುಣ್ಣದಕಲ್ ಇದ್ದರು.
ದೇವದುರ್ಗ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಅನುಕೂಲಕ್ಕಾಗಿ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ಮುಖಂಡರು ಪಟ್ಟಣದ ಬಸ್ ಡಿಪೋದಲ್ಲಿ ಘಟಕ ವ್ಯವಸ್ಥಾಪಕ ರಾಮನಗೌಡಗೆ ಬುಧವಾರ ಮನವಿ ಸಲ್ಲಿಸಿದರು.
ದೇವದುರ್ಗ, ಗಬ್ಬೂರು, ಜಾಲಹಳ್ಳಿ, ಅರಕೇರಾ ಸೇರಿ ವಿವಿಧ ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ. ನಾಲ್ಕು ಹೋಬಳಿಗಳ ಸುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ಬಂದು ಹೋಗುತ್ತಿದ್ದಾರೆ. ಸದ್ಯ ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿ ವಿವಿಧ ತರಗತಿಗಳ ಪರೀಕ್ಷೆ ಪ್ರಾರಂಭವಾಗಿವೆ. ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪರೀಕ್ಷಾ ಸಮಯದಲ್ಲಾದರೂ ಬಸ್ ವ್ಯವಸ್ಥೆ ಕಲ್ಪಿಸಿ, ವೇಗದೂತ ಬಸ್‌ಗಳನ್ನು ಹಳ್ಳಿಗಳಲ್ಲಿ ನಿಲುಗಡೆ ಮಾಡಿ ಎಂದು ಒತ್ತಾಯಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಸಂತೋಷ್ ತ್ಯಾಪ್ಲಿ, ಬಾಬು, ಬಾಷಾಸಾಬ್, ಹನುಮಂತ ಮಡಿವಾಳ, ರಾಜು ನಾಯಕ, ನಿಂಗಯ್ಯ ಸುಣ್ಣದಕಲ್ ಇತರರಿದ್ದರು.