ದೇವದುರ್ಗ: ಗುಂಟ್ರಾಳ ಗ್ರಾಮದಿಂದ ದೇವದುರ್ಗವರೆಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಡಿಪೋ ಮ್ಯಾನೇಜರ್ ರಾಜಶೇಖರ್‌ಗೆ ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೋಮವಾರ ಮನವಿ ಸಲ್ಲಿಸಿದರು.
ಗುಂಟ್ರಾಳ ಗ್ರಾಮದಿಂದ ಪಟ್ಟಣಕ್ಕೆ ನಿತ್ಯ ಹಲವು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಓಡಾಡುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೆ ಸಮಸ್ಯೆಯಾಗಿದೆ. ಬಸ್ ಚಾಲಕರು, ನಿರ್ವಾಹಕರಿಗೆ ಹಲವು ಸಲ ಫೋನ್‌ಮಾಡಿ ಸಮಸ್ಯೆ ಹೇಳಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಶಾಲಾ ಕಾಲೇಜಿಗೆ ಹೋಗಲು ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ ಎಂದು ಆರೋಪಿಸಿದರು.
ಗುಂಟ್ರಾಳ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಬೇಕು. ಬೆಳಗ್ಗೆ 8ಗಂಟೆಗೆ ಗುಂಟ್ರಾಳ್‌ನಿಂದ ದೇವದುರ್ಗ, ಮಧ್ಯಾಹ್ನ 2, ಸಂಜೆ 5ಕ್ಕೆ ದೇವದುರ್ಗದಿಂದ ಗುಂಟ್ರಾಳಗೆ ಬಸ್ ಓಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಭೀಮೇಶಪ್ಪ ಭಂಡಾರಿ, ಹನುಮಂತ್ರಾಯ ನಾಯಕ, ಅಜ್ಮೀರ್, ದಲಿತ ಸಂಘಟನೆ ಮುಖಂಡರಾದ ಹನುಮಂತಪ್ಪ ಮನ್ನಾಪುರ, ಬುರ್ರಪ್ಪ ಮರೆಡ್ಡಿ, ಭೀಮೇಶಪ್ಪ ಭಂಡಾರಿ, ಪ್ರದೀಪ್ ಕುಮಾರ ಕಾಡೋತಿ ಹಾಗೂ ವಿದ್ಯಾರ್ಥಿಗಳಿದ್ದರು.