ಸಮರ್ಪಕ ಸಾರಿಗೆ ಸೌಕರ್ಯ ಒದಗಿಸಿ

ಲಿಂಗಸುಗೂರಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಹಟ್ಟಿಯಲ್ಲಿ ಡಿಪೋ ಮ್ಯಾನೇಜರ್ ಪಿ.ಲಕ್ಷ್ಮಣ್‌ಗೆ ಸಂಘಟನೆಗಳ ಮುಖಂಡರು ಆಗ್ರಹಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ವೆಂಕೋಬ್ ಮಿಯ್ಯಪೂರ, ನಿಂಗಪ್ಪ ವೀರಾಪೂರ ಇತರರಿದ್ದರು.
ಲಿಂಗಸುಗೂರಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಹಟ್ಟಿಯಲ್ಲಿ ಡಿಪೋ ಮ್ಯಾನೇಜರ್ ಪಿ.ಲಕ್ಷ್ಮಣ್‌ಗೆ ಸಂಘಟನೆಗಳ ಮುಖಂಡರು ಆಗ್ರಹಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ವೆಂಕೋಬ್ ಮಿಯ್ಯಪೂರ, ನಿಂಗಪ್ಪ ವೀರಾಪೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು, ಜನವಾದಿ ಮಹಿಳಾ ಸಂಘಟನೆ ಆಗ್ರಹ
  • ಹಟ್ಟಿಚಿನ್ನದಗಣಿ ವಿದ್ಯಾರ್ಥಿಗಳ ಪ್ರತಿಭಟನೆ
ಹಟ್ಟಿಚಿನ್ನದಗಣಿ: ಲಿಂಗಸುಗೂರು-ಹಟ್ಟಿ ಮಾರ್ಗದಲ್ಲಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಎಸ್‌ಎಫ್‌ಐ, ಸಿಐಟಿಯು ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೊಸ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಮೂರು ತಾಸು ಬಸ್‌ಗಳ ಸಂಚಾರ ತಡೆದು, ಲಿಂಗಸುಗೂರು ಡಿಪೋದಿಂದ ಹಟ್ಟಿ ಮಾರ್ಗಕ್ಕೆ ಸಮರ್ಪಕವಾಗಿ ಬಸ್‌ಗಳ ಸಂಚಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ ಮಾತನಾಡಿ, ಲಿಂಗಸುಗೂರು ಡಿಪೋದಲ್ಲಿ ಬಸ್‌ಗಳ ಕೊರತೆಯಿದ್ದು, ಗುಜರಿಗೆ ಹಾಕುವ ಹಂತದಲ್ಲಿರುವ ಬಸ್‌ಗಳನ್ನೇ ಗ್ರಾಮೀಣ ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ. ಈ ಬಸ್‌ಗಳು ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿದ್ದು, ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆ-ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ. ಕೆಲಸಕ್ಕೆ ಹೋಗುವವರಿಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ತಾಲೂಕಿಗೆ ಹೊಸ ಬಸ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಚಿನ್ನದಗಣಿ ಕಾರ್ಮಿಕ ಸಂಘದ ಮುಖಂಡರಾದ ವೆಂಕೋಬ್ ಮಿಯ್ಯಪೂರ, ನಿಂಗಪ್ಪ ವೀರಾಪೂರ, ಕೆಪಿಆರ್‌ಎಸ್ ಮುಖಂಡರಾದ ಪೆಂಚಲಯ್ಯ, ವನಜಾಕ್ಷಿ, ಹಾಜಿಬಾಬು, ಅಲ್ಲಾಭಕ್ಷ, ರಜಿಯಾ, ಸಾಹಿರಾಬಾನು, ದುರುಗಮ್ಮ, ಫಕ್ರುದ್ದೀನ್, ದಾವೂದ್, ಡಿವೈಎಫ್‌ಐ ಮುಖಂಡ ಕಾಶಿಪತಿ ತವಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net