ಕುಡಿಯುವ ನೀರು ಸಮಪರ್ಕವಾಗಿ ಒದಗಿಸಿ

ಬೇಸಿಗೆ ನಿಮಿತ್ತ ನಗರಕ್ಕೆ ಸಮಪರ್ಕ ನೀರು ಒದಗಿಸಲು ಪಾಲಿಕೆ ಆಯುಕ್ತರ ಕಚೇರಿಯಲ್ಲಿ  ಭಾನುವಾರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಜತೆಗೆ ನಗರ ಶಾಸಕ ಡಾ.ಶಿವರಾಜ ಪಾಟೀಲ್  ಪೂರ್ವಭಾವಿ ಸಭೆ ಮಾಡಿದರು. ಪಾಲಿಕೆ ಮಾಜಿ ಸದಸ್ಯರುಗಳಾದ ಇ.ಶಶಿರಾಜ, ಆಂಜಿನೇಯ್ಯ ಫೋಗಲ್, ರವೀಂದ್ರ ಜಲ್ದಾರ, ಕಡಗೋಳ ಆಂಜಿನೇಯ್ಯ ಇದ್ದರು.

Published on
ರಾಯಚೂರು
ಬೇಸಿಗೆ ನಿಮಿತ್ತ ನಗರಕ್ಕೆ ಸಮಪರ್ಕ ನೀರು ಒದಗಿಸಲು ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಭಾನುವಾರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಜತೆಗೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಪೂರ್ವಭಾವಿ ಸಭೆ ಮಾಡಿದರು.
ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಳವಾಗುತ್ತಿರುವದರಿಂದ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿರುವ ಕೊಳವೆಭಾವಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಅವಶ್ಯಸ್ಥೆ ಕಂಡುಬಂದಲ್ಲಿ ನೀರು ಪೂರೈಸಲು ಎಚ್ಚರವಹಿಸಬೇಕಿದೆ. ಎಲ್ಲ ವಾರ್ಡ್‌ಗಳ ನೀರು ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಬೇಕು. ನೀರು ಪೂರೈಕೆಗೆ ಟ್ಯಾಂಕ್‌ಗಳ ಭರ್ತಿಗೆ ಮೋಟಾರ್‌ಗಳನ್ನು ಹೆಚ್ಚುವರಿಯಾಗಿಟ್ಟುಕೊಂಡು ಸುಟ್ಟಹೋದಲ್ಲಿ ಬಳಕೆಯ ಕುರಿತು ಸಿದ್ದತೆ ನಡೆಸಬೇಕಿದೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಜೆಸ್ಕಾಂ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ನೀರು ಪೂರೈಕೆ ವ್ಯವಸ್ಥೆಯನ್ನು ನಿಗಾವಹಿಸಬೇಕು. ನದಿಗಳಲ್ಲಿ ಬೇಸಿಗೆಯಿಂದ ನೀರು ಬತ್ತಿ ಹೋಗುವದರಿಂದ ಅಶುದ್ಧವಾದ ನೀರು ಪೂರೈಕೆಯಾಗುವ ಸಾಧ್ಯತೆಗಳಿರುತ್ತದೆ. ಕಾರಣ ಬ್ಲಿಚಿಂಗ್ ಪೌಡರ್, ಅಲಂ ಸಂಗ್ರಹಣೆ ವ್ಯವಸ್ಥೆ ಮಾಡಿಕೊಂಡು ಕಲುಷಿತ ನೀರು ಪೂರೈಕೆಯಾಗದಂತೆ ನಿರ್ಗಾವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರುಗಳಾದ ಇ.ಶಶಿರಾಜ, ಆಂಜಿನೇಯ್ಯ ಫೋಗಲ್, ರವೀಂದ್ರ ಜಲ್ದಾರ, ಕಡಗೋಳ ಆಂಜಿನೇಯ್ಯ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net