ನಿರಶನ ಕೈಬಿಟ್ಟ ಹೋರಾಟಗಾರರು

ಲಿಂಗಸುಗೂರು ಕೃಷಿ ಕಚೇರಿ ಆವರಣದಲ್ಲಿ ಶನಿವಾರ ನಿರಶನ ಹಿಂಪಡೆದ ಹೋರಾಟಗಾರರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ್‌ಗೆ ಮನವಿ ಸಲ್ಲಿಸಿದರು.
ಲಿಂಗಸುಗೂರು ಕೃಷಿ ಕಚೇರಿ ಆವರಣದಲ್ಲಿ ಶನಿವಾರ ನಿರಶನ ಹಿಂಪಡೆದ ಹೋರಾಟಗಾರರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ್‌ಗೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆ ಜೆಡಿ ಮನವಿಗೆ ಸ್ಪಂದನೆ
  • ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ
ಲಿಂಗಸುಗೂರು: ಕೃಷಿ ಇಲಾಖೆ ಜಂಟಿ ನಿರ್ದೇಶಕ ಮನವೊಲಿಸಿದ್ದರಿಂದ ಪಟ್ಟಣದ ಕೃಷಿ ಕಚೇರಿ ಆವರಣದಲ್ಲಿ ಶನಿವಾರ ಲಿಂಗಸುಗೂರು ಅಭಿವೃದ್ಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ನಿರಶನ ಕೈಬಿಟ್ಟಿದ್ದು, ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಿದೆ.
ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ 12 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಶನಿವಾರದಿಂದ ನಿರಶನಕ್ಕೆ ಮುಂದಾಗಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ್ ಶನಿವಾರ ರಾತ್ರಿ ಧರಣಿ ಕುಳಿತ ಸ್ಥಳಕ್ಕೆ ಆಗಮಿಸಿ ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಇಲಾಖೆ ಮೇಲಧಿಕಾರಿಗಳು ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಹೋಗಿದ್ದಾರೆ.
ಅಧಿವೇಶನ ಮುಗಿಯುವವರೆಗೆ ಸಿಗುವುದಿಲ್ಲ. ಅಧಿವೇಶನ ಮುಗಿದ ನಂತರ ಹೋರಾಟದ ಸಮಗ್ರ ವರದಿ ಮೇಲಧಿಕಾರಿಗಳಿಗೆ ನೀಡಲಾಗುವುದು. ಮುಂದಿನ ನಿರ್ಧಾರದವರೆಗೆ ಹೋರಾಟ ಕೈಬಿಡುವಂತೆ ಕೋರಿದರು. ಹೀಗಾಗಿ ನಿರಶನ ಕೈಬಿಟ್ಟ ಹೋರಾಟಗಾರರು, ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುತ್ತೇವೆ. ಕಚೇರಿ ಸಿಂಧನೂರಿಗೆ ಸ್ಥಳಾಂತರಿಸಲು ಕಾರಣರಾದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ದಾಖಲೆಗಳು ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪಾಟೀಲ್, ಸಿಪಿಐ (ಎಂ) ಕಾರ್ಯದರ್ಶಿ ರಮೇಶ ವೀರಾಪುರ, ಕರವೇ ತಾಲೂಕು ಅಧ್ಯಕ್ಷ ಮಾದೇಶ ಸರ್ಜಾಪುರ, ಮುಖಂಡರಾದ ವಿಜಯಕುಮಾರ ಪೋಳ, ಹನುಮಂತ ನೇಲ್ಗಿ, ಆನಂದ ಕುಂಬಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net