ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆ ವಿರೋಧಿಸಿ ಆ.10 ರಂದು ಪ್ರತಿಭಟನೆ

ರಾಜ್ಯ ರೈತ ಸಂಘದ ಗೌರಾಧ್ಯಕ್ಷ  ಚಾಮರಸ ಮಾಲೀ ಪಾಟೀಲ್
ರಾಜ್ಯ ರೈತ ಸಂಘದ ಗೌರಾಧ್ಯಕ್ಷ ಚಾಮರಸ ಮಾಲೀ ಪಾಟೀಲ್
Published on
ರಾಯಚೂರು ರಾಜ್ಯದಲ್ಲಿ ಬರಛಾಯೆ ಆವರಿಸಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸ್ಪಂದಿಸುವ ಕೆಲಸ ಮಾಡದೇ ನಿರ್ಲಕ್ಷ್ಯವಹಿಸುತ್ತಿರುವ ವಿರುದ್ದ ರೈತ ಸಂಘದಿಂದ ಆಗಸ್ಟ್ 10 ರಂದು ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 180 ತಾಲೂಕಗಳಲ್ಲಿ ಬರಸ್ಥಿತಿಯಿದೆ. ಜಿಲ್ಲೆಯಲ್ಲಿ ಶೇ.38 ರಷ್ಟು ಮಳೆ ಕೊರತೆಯಿದ್ದು, ಶೇ.50 ಬಿತ್ತನೆ ಮಾಡಿರುವ ಬೆಳೆ ಬೆಳೆಬಾರದ ಪರಸ್ಥಿತಿಯಲ್ಲಿದೆ. ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವರಿಕೆ ಮಾಡಿದರೂ ಸ್ಪಂದಿಸುವ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಸಗೊಬ್ಬರ ಖರೀದಿ ಇತರೆ ಗೊಬ್ಬರಗಳ ಲಿಂಕ್ ಮಾಡಲಾಗುತ್ತಿದೆ.
ಕೊಪ್ಪಳದಲ್ಲಿ ಬುಲ್ಲೋಟ್ ಕಂಪನಿಗೆ ವಹಿಸಿರುವ ಕೆರೆ ಮುಕ್ತಗೊಳಿಸಲು ಹೋದ ಹೋರಾಟಗಾರರ ಮೇಲೆ ಕೇಸ್ ಹಾಕಿರುವದು ಖಂಡನೀಯ. ಅಲ್ಲಂಪ್ರಭು ಪಾಟೀಲ್ ಬೆಟ್ಟದುರು ಸೇರಿ ಆರು ಜನರ ವಿರುದ್ದ ಕೇಸ್ ಹಾಕಲಾಗಿದೆ. ಘಟನೆಗೆ ಜಿಲ್ಲಾಡಳಿತವೇ ಹೊಣೆಯಾಗಿದೆ. ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬಹುದಿತ್ತು. ಆಡಳಿತ ಜಿಡ್ಡು ಗಟ್ಟಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸುವ ಮನೋಭಾವವೇ ಇಲ್ಲದೇ ಹೋಗಿ ಆಡಳಿತ ವ್ಯವಸ್ಥೆಯೇ ಸತ್ತುಹೋದಂತಿದೆ ಎಂದು ಟೀಕಿಸಿದರು.
ನಾರಾಯಣಪುರು ಬಲದಂಡೆ ಕಾಲುವೆ ನೀರು ಹರಿಸಲಾಗಿದೆ. ಆದರೆ ಕಾಲುವೆ ಹೂಳೂ ತೆಗೆಯದೇ ನೀರು ಹರಿಸಿದ ಪರಿಣಾಮ ಕಾಲುವೆ ಒಡೆದು ರೈತರ ಬೆಳೆ ಹಾನಿಯಾಗಿದೆ. ಕೆಬಿಜೆಎನ್‌ಎಲ್ ಇಇ ಇವರಿಗೆ ಪೋನ್ ಮಾಡಿದರೆ ಸಚಿವರಿಗೆ ಹೇಳಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ. ರೈತರ ಕಷ್ಟ ಸರ್ಕಾರಕ್ಕೆ ಅರಿವೇ ಇಲ್ಲದಂತಾಗಿದೆ. ಅಧಿಕಾರಿಗಳು ಕೆಲಸ ಮಾಡದೇ ನಿರ್ಲಕ್ಷವಹಿಸುತ್ತಿದ್ದಾರೆ. ಜನರೇ ಕಪಾಳ ಮೋಕ್ಷ ಮಾಡುವ ದುಸ್ಥಿತಿ ಎದುರಾಗಿದೆಎಂದು ಖೇದ ವ್ಯಕ್ತಪಡಿಸಿದರು.
ಜೋಳ ಖರೀಧಿ ಮಾಡಿದ ಹಣ ಇನ್ನೂ ಪಾವತಿಯಾಗಿಲ್ಲ. ಕೇಂದ್ರ ಸರ್ಕಾರವೇ ಹಣ ಬಿಡುಗಡೆ ಮಾಡಬೇಕು. ಆದರೂ ಬಿಜೆಪಿಯಯವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿ ಅವರೇ ಹಣ ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿಯವರು ಕಾಟಾಚಾರಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಣ್ಣ ದಿನ್ನಿ, ಬೂದೆಯ್ಯ ಸ್ವಾಮಿ , ದೇವರಾಜ ನಾಯಕ, ಮಲ್ಲಯ್ಯ ಚಂದ್ರಬಂಡಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net