ಸುರಕ್ಷಾ ಕಿಟ್ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ

ಸಿಂಧನೂರಿನ ಸಭಾಂಗಣದಲ್ಲಿ ನಮಸ್ತೆ ದಿನಾಚರಣೆ ನಿಮಿತ್ತ ಚಿಂದಿ ಆಯುವವರಿಗೆ ಸಮಸ್ತೆ ಯೋಜನೆಯಡಿ ಸುರಕ್ಷಾ ಕಿಟ್‌ಗಳನ್ನು ಪೌರಾಯುಕ್ತ ಪಾಂಡುರಂಗ ಇಟಗಿ ವಿತರಣೆ ಮಾಡಿದರು. ಪರಿಸರ ಇಂಜಿನಿಯರ್ ಚೇತನಕುಮಾರ, ಆರೋಗ್ಯ ನಿರೀಕ್ಷಕರಾದ ಕಿಶನ್‌ರಾವ್, ಲಿಂಗರಾಜ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪೌರಾಯುಕ್ತ ಪಾಂಡುರಂಗ ಇಟಗಿ ಸಲಹೆ
  • ಸಿಂಧನೂರು ನಮಸ್ತೆ ದಿನಾಚರಣೆ ಸುರಕ್ಷಾ ಕಿಟ್
ಸಿಂಧನೂರು: ಸ್ಥಳೀಯ ಸಭಾಂಗಣದಲ್ಲಿ ನಮಸ್ತೆ ದಿನಾಚರಣೆ ನಿಮಿತ್ತ ಚಿಂದಿ ಆಯುವವರಿಗೆ ಸಮಸ್ತೆ ಯೋಜನೆಯಡಿ ಸುರಕ್ಷಾ ಕಿಟ್‌ಗಳನ್ನು ಪೌರಾಯುಕ್ತ ಪಾಂಡುರಂಗ ಇಟಗಿ ವಿತರಿಸಿದರು.
ನಂತರ ಮಾತನಾಡಿ, ಚಿಂದಿ ಆಯುವವರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುರಕ್ಷಾ ಕಿಟ್‌ಗಳನ್ನು ನೀಡಿವೆ. ಅವುಗಳನ್ನು ಕೆಲಸದ ವೇಳೆಯಲ್ಲಿ ಸರಿಯಾಗಿ ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲರೂ ನಶಾಮುಕ್ತ ಭಾರತ ಅಭಿಯಾನ ಕುರಿತು ಪ್ರಮಾಣವಚನ ಸ್ವೀಕರಿಸಿದರು. ಪರಿಸರ ಇಂಜಿನಿಯರ್ ಚೇತನಕುಮಾರ, ಆರೋಗ್ಯ ನಿರೀಕ್ಷಕರಾದ ಕಿಶನ್‌ರಾವ್, ಲಿಂಗರಾಜ, ನಮಸ್ತೆ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net