50 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಕೆ

ಲಿಂಗಸುಗೂರಿನಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಅವರನ್ನು ತಾಲೂಕು ಭಗೀರಥ ಉಪ್ಪಾರ ಸಂಘದಿಂದ ಸನ್ಮಾನಿಸಲಾಯಿತು.
ಲಿಂಗಸುಗೂರಿನಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಅವರನ್ನು ತಾಲೂಕು ಭಗೀರಥ ಉಪ್ಪಾರ ಸಂಘದಿಂದ ಸನ್ಮಾನಿಸಲಾಯಿತು.
Published on

ಲಿಂಗಸುಗೂರು: ಉಪ್ಪಾರ ಸಮುದಾಯದ ಜನರಿಗೆ ಆರ್ಥಿಕ ಸಹಾಯ ಮತ್ತು ಸ್ವಯಂ ಉದ್ಯೋಗ ಸಾಲ ಸೌಲಭ್ಯಕ್ಕಾಗಿ 40 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು.

ತಾಲೂಕು ಭಗೀರಥ ಉಪ್ಪಾರ ಸಂಘದಿಂದ ಸನ್ಮಾನ ಸ್ವೀಕರಿಸಿ ಭಾನುವಾರ ಮಾತನಾಡಿದರು. ನಿಗಮದಿಂದ ಸ್ವಯಂ ಉದ್ಯೋಗ, ಶೈಕ್ಷಣಿಕ, ಗಂಗಾಕಲ್ಯಾಣ, ಸ್ವಾವಲಂಬಿ ಸಾರಥಿ ಯೋಜನೆಯಡಿ ಸಾಲ ಸೌಲಭ್ಯ ಇದೆ. ಫುಡ್ ಪಾರ್ಕ್‌ಗಳ ಮೂಲಕ ರೈತರಿಗೆ ಆಹಾರ ಸಂಸ್ಕರಣೆಗೆ ಸಹಾಯ ಮಾಡಲಾಗುತ್ತದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಕೇವಲ 2 ಕೋಟಿ ರೂ. ನೀಡಲಾಗಿತ್ತು. ಕಳೆದ ವರ್ಷ ನಿಗಮಕ್ಕೆ 33 ಕೋಟಿ ರೂ. ನೀಡಲಾಗಿದೆ. ಈ ವರ್ಷ 11 ಕೋಟಿ ರೂ. ನೀಡಲಾಗಿದ್ದು, 50 ಕೋಟಿ ರೂ. ಒದಗಿಸುವಂತೆ ಕೇಳಲಾಗಿದೆ. ಹೆಚ್ಚಿನ ಹಣ ಬಿಡುಗಡೆಯಾಗದಿದ್ದರೆ ರೂ.40 ಕೋಟಿ ಕ್ರಿಯಾಯೋಜನೆಗೆ ಮಂಜೂರಾತಿ ಪಡೆದು ಸೌಲಭ್ಯ ಕಲ್ಪಿಸಲಾಗುವುದು, ಫಲಾನುಭವಿಗಳ ಆಯ್ಕೆ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರುತ್ತಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net