ಹೊಸ ಕಟ್ಟಡ ದುರಸ್ತಿಗೂ ಪ್ರಸ್ತಾವನೆ !

ಲಿಂಗಸುಗೂರು ತಾಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ತಾಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ್, ಇಒ ಉಮೇಶ ಇದ್ದರು.
ಲಿಂಗಸುಗೂರು ತಾಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ತಾಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ್, ಇಒ ಉಮೇಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ
  • ಯೋಜನೆಗಳಡಿ
  • ಬಿಡುಗಡೆ
ಲಿಂಗಸುಗೂರು: ಅಧಿಕಾರಿಗಳು ವಿವಿಧ ಯೋಜನೆಗಳಡಿ ಬಿಡುಗಡೆಯಾದ ಅನುದಾನವನ್ನು ಬಳಕೆ ಮಾಡಿ ನಿಗದಿಪಡಿಸಿದ ಗುರಿ ಸಾಧಿಸಬೇಕು ಎಂದು ತಾಪಂ ಆಡಳಿತಾಧಿಕಾರಿಯೂ ಆದ ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಾ.ವಿಜಯ ಶಂಕರ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಟಿಎಚ್‌ಒ ಡಾ.ಅಮರೇಶ ಪಾಟೀಲ್ ಅವರು ಅನಿರ್ಬಂಧಿತ ಅನುದಾನದಲ್ಲಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಲೋಪ ಕಂಡುಬಂದಿದ್ದರಿಂದ ತರಾಟೆಗೆ ತೆಗೆದುಕೊಂಡರು.
ಈಗಾಗಲೇ ಈಚನಾಳ, ನಾಗರಹಾಳ, ಸಜ್ಜಲಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸ ಕಟ್ಟಡ ಕಟ್ಟಲಾಗಿದ್ದರೂ ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದರಿಂದ ಕೂಡಲೇ ಕಾಮಗಾರಿ ಬದಲಿಸುವಂತೆ ಡಾ.ವಿಜಯ ಶಂಕರ್ ಸೂಚಿಸಿದರು.
ಬಿಇಒ ಸುಜಾತಾ ಹೂನೂರು ಮಾತನಾಡಿ, ಗುಂತಗೋಳ, ಹಿರೇಹೆಸರೂರು, ಮಾಚನೂರು, ಬೆಂಚಲದೊಡ್ಡಿ, ಹಾಲಭಾವಿ, ಗೋಲಪಲ್ಲಿ, ರಾಮತ್ನಾಳ, ಹಲ್ಕಾವಟಗಿ, ನವಲಿ, ಉಳಿಮೇಶ್ವರ, ಹೂನೂರು, ರಾಯದುರ್ಗ, ಟಣಮನಕಲ್ಲ, ಬಾರಿಗಿಡದದೊಡ್ಡಿ, ಪ್ರಾಥಮಿಕ ಶಾಲೆಗಳಲ್ಲಿ ನೆಲಹಾಸು, ಕಿಟಕಿ, ಬಾಗಿಲು ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇವರಭೂಪೂರ ಪ್ರಾಥಮಿಕ ಶಾಲೆ ದುರಸ್ತಿ ಕಾಮಗಾರಿ ಬದಲಾವಣೆ ಮಾಡಲು ತಿಳಿಸಲಾಗಿದೆ ಎಂದರು.
ಸಿಡಿಪಿಒ ನಾಗರತ್ನಾ ಮಾತನಾಡಿ, ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದರಿಂದ ಈ ಮೊದಲು ಕಳಿಸಿದ ಪ್ರಸ್ತಾವನೆಗಳಲ್ಲಿ ಕೆಲವು ಬದಲಾವಣೆ ಮಾಡಬೇಕಾಗಿದೆ. ನರಕಲದಿನ್ನಿ, ಚಿತಾಪುರ, ಬ್ಯಾಲಿಹಾಳ, ಕನ್ನಾಪುರಹಟ್ಟಿ, ಆನೆಹೊಸೂರು, ಕಾಲಳೇರದೊಡ್ಡಿ, ಗೊಲ್ಲರದೊಡ್ಡಿ, ನಾಗರಹಾಳ, ಯರಜಂತಿ, ಗೌಡೂರು ತಾಂಡಾ, ಗುಡದನಾಳ, ಅಂಗನವಾಡಿಗಳಿಗೆ ಕಾಂಪೌಂಡ್ ನಿರ್ಮಾಣ, ಗೇಟ್ ಅಳವಡಿಕೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾಚನೂರು ತಾಂಡಾ, ಯರಜಂತಿ ಅಂಗನವಾಡಿಗಳ ಶೌಚಗೃಹ ನಿರ್ಮಾಣ ಕಾಮಗಾರಿ ಬದಲಾವಣೆ ಮಾಡಬೇಕಾಗಿದೆ. ಕಡ್ಡೋಣ, ಜಾಲಿಬೆಂಚಿ, ರೋಡಲಬಂಡಾ ಕೇಂದ್ರಗಳಿಗೆ ಶೌಚಗೃಹ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೃಷಿ ಇಲಾಖೆ ಅನುದಾನದಲ್ಲಿ ಲಿಂಗಸುಗೂರು ರೈತ ಸಂಪರ್ಕ ಕೇಂದ್ರಕ್ಕೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾಮಗಾರಿ ಮುಗಿದಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು. ತಾಪಂ ಇಒ ಉಮೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net