ನೀರು ಸ್ಥಗಿತಗೊಂಡಾಗಲೂ ಕಾರ್ಮಿಕರಿಗೆ ಕೆಲಸ ನೀಡುವ ಭರವಸೆ

ಕೆ.ನಾಗಲಿಂಗಸ್ವಾಮಿ
ಕೆ.ನಾಗಲಿಂಗಸ್ವಾಮಿ
Published on
ರಾಯಚೂರು ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದಿಂದ ನೀರು ಸ್ಥಗಿತಗೊಂಡಾಗಲೂ ಕೆಲಸ ನೀಡುವ ಕುರಿತು ಜ.8 ರಂದು ಕಲಬುರಗಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಕಾರ್ಮಿಕರನ್ನು ಕೆಲಸದಲ್ಲಿ ಮುಂದುರೆಸಲಾಗುತ್ತದೆಂದು ಕಾರ್ಮಿಕ ಆಯುಕ್ತರು ಸೂಚಿಸಿದ್ದಾರೆಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಮಾತನಾಡಿ, ಕಳೆದ 25 ರಿಂದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರು ತುಂಗಭದ್ರಾ ಕಾರ್ಮಿಕರ ವೇತನ ಸೇರಿದಂತೆ ಖಾಯಂಗೊಳಿಸಲು ಆಯುಕ್ತರಿಗೆ ಒತ್ತಾಯಿಸಲಾಗಿದೆ.
ನಮ್ಮ ಸಂಘದಲ್ಲಿ 1078 ಕಾರ್ಮಿಕರ ಸದಸ್ಯತ್ವ ಪಡೆದಿದ್ದು, ಯರಮರಸ್ ವೃತ್ತದಿಂದ 6 ತಿಂಗಳ ವೇತನ, ವಡ್ಡರಹಟ್ಟಿ ಉಪ ವಿಭಾಗದಿಂದ 7 ತಿಂಗಳು, ಕೊಪ್ಪಳ್ಳ, ಬಳ್ಳಾರಿ, ವಿಜಯನಗರ, ರಾಯಚೂರು ಸೇರಿ ನಾಲ್ಕು ಜಿಲ್ಲೆಗಳ ಕಾರ್ಮಿಕರಿಗೆ ನ್ಯಾಯ ಒದಗಿಸಲು ಪ್ರತ್ಯೇಕ ದೂರು ದಾಖಳಿಸಲಾಗಿದ್ದು,
ಸಂಘದ ಯಾವುದೇ ಕಾರ್ಮಿಕರಿಗೆ ಕೆಲಸಕ್ಕೆ ಬರದಂತೆ ಅಧಿಕಾರಿಗಳು ಸೂಚಿಸಿಲ್ಲ. ಕಾರ್ಮಿಕರು ಆಂತಕಕ್ಕೆ ಒಳಗಾಗುವದು ಬೇಡ. ಬಾಕಿಯಿರುವ ವೇತನ ಪಾವತಿಕುರಿದಂತೆ ಉಪ ಕಾರ್ಮಿಕ ಆಯುಕ್ತರ ಬಳಿ ದೂರು ವಿಚಾರಣೆ ಹಂತದಲ್ಲಿದ್ದು ಶೀಘ್ರ ಅಂತಿಮ ಆದೇಶ ಹೊರಬೀಳುವ ವಿಶ್ವಾಸವಿದೆ. ಕಾನೂನು ಆದೇಶ ಪಾಲಿಸದೇ ಹೋದಲ್ಲಿ ಮುನಿರಾಬಾದ್‌ನಿಂದ ಯರಮರಸ್‌ವರೆಗೆ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿರವಾರ ವಿಭಾಗದ ಅಧ್ಯಕ್ಷ ರಾಜಮಹ್ಮದ, ಎಂ.ಬಸವರಾಜ, ನಿಸಾರ ಅಹ್ಮದ್, ಜಲೀಲ ಪಾಷಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net