ಸಿಂಧನೂರು ಟಿಎಪಿಸಿಎಂಎಸ್‌ನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಗೆ ಚಾಲನೆ ನೀಡಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಜೀರ್ ಅಹ್ಮದ್, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ತಹಸೀಲ್ದಾರ್ ಅರುಣ ಎಚ್ ದೇಸಾಯಿ, ಟಿಎಪಿಎಸಿಎಂಎಸ್‌ನ ಅಧ್ಯಕ್ಷ ಶರಣಪ್ಪ ರಡ್ಡೇರ್ ಇದ್ದರು.
ಸಿಂಧನೂರು: ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್‌ಎಕ್ಯೂ ಗುಣಮಟ್ಟದ ಜೋಳ ಖರೀದಿ ಮಾಡಲಾಗುವುದು. ಈಗಾಗಲೇ ಜೋಳ ಖರೀದಿಗೆ ನೋಂದಣಿ ಪೂರ್ಣಗೊಂಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಜೀರ್ ಅಹ್ಮದ್ ಹೇಳಿದರು.
ನಗರದ ಟಿಎಪಿಸಿಎಂಎಸ್‌ನಲ್ಲಿ ಮಂಗಳವಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ 36 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾರಿಗೆ ವ್ಯವಸ್ಥೆಗೆ 130ಲಾರಿಗಳ ಹಾಗೂ ಖರೀದಿಯಾದ ಜೋಳ ಸಂಗ್ರಹಣೆ ಮಾಡಲು 9ಗೋದಾಮು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿಕ ಸಮಾಜದ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ, ಸಹಾಯಕ ಕೃಷಿ ನಿರ್ದೇಶಕ ರುದ್ರಗೌಡ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ನಾಗರತ್ನಾ, ಆಹಾರ ಇಲಾಖೆ ಶಿರಸ್ತೇದಾರ್ ಆನಂದ ಮೋಹನ್, ಗೋದಾಮು ವ್ಯವಸ್ಥಾಪಕ ದೌಲಸಾಬ್, ಟಿಎಪಿಸಿಎಂಎಸ್‌ನ ಕಾರ್ಯದರ್ಶಿ ಹನುಮರೆಡ್ಡಿ ನಿಡಿಗೋಳ ಇದ್ದರು.