ಸುಂದರ ಪಟ್ಟಣ ನಿರ್ಮಾಣಕ್ಕೆ ಆದ್ಯತೆ

ದೇವದುರ್ಗ ಬಸವೇಶ್ವರ ವೃತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಭೂಮಿಪೂಜೆ ನೆರವೇರಿಸಿದರು. ಜೆಡಿಎಸ್ ಮುಖಂಡರಾದ ರೇಣುಕಾ ಮಯೂರಸ್ವಾಮಿ, ತಬಸೂಮ್ ಉದ್ದಾರ್, ರಾಘವೇಂದ್ರ ಇತರರಿದ್ದರು.
ದೇವದುರ್ಗ ಬಸವೇಶ್ವರ ವೃತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಭೂಮಿಪೂಜೆ ನೆರವೇರಿಸಿದರು. ಜೆಡಿಎಸ್ ಮುಖಂಡರಾದ ರೇಣುಕಾ ಮಯೂರಸ್ವಾಮಿ, ತಬಸೂಮ್ ಉದ್ದಾರ್, ರಾಘವೇಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 2.5ಕೋಟಿ ರೂ.
  • ಚಾಲನೆ
  • ಕಾಮಗಾರಿ
ದೇವದುರ್ಗ: ಸ್ವಚ್ಛ, ಸುಂದರ ದೇವದುರ್ಗ ಪಟ್ಟಣ ನಿರ್ಮಾಣ ಮಾಡುವ ಗುರಿ ಹಾಕಿಕೊಂಡು ಅದಕ್ಕೆ ತಕ್ಕಂತೆ ವಿವಿಧ ಯೋಜನೆಯಡಿ ಅನುದಾನ ತಂದಿದ್ದೇನೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದಲ್ಲಿ ರಸ್ತೆ ವಿಭಜಕ, ಬೀದಿದೀಪ ನಿರ್ಮಾಣ ಸೇರಿ ಎರಡೂವರೆಗೆ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಸುಂದರ ಪಟ್ಟಣ ನಿರ್ಮಾಣ ಮಾಡುವುದು ನನ್ನ ಕನಸಾಗಿದ್ದು ರಾಜಕೀಯ ಮೀರಿ ಅದನ್ನು ನನಸು ಮಾಡಲು ಶ್ರಮಿಸುತ್ತಿದ್ದೇನೆ. ಕೆಕೆಆರ್‌ಡಿಬಿಯಿಂದ ಮೊದಲ ಹಂತದಲ್ಲಿ ಬಿಎಚ್ ಕಲ್ಯಾಣ ಮಂಟಪದಿಂದ ಸಾರ್ವಜನಿಕ ಕ್ಲಬ್ ಮೈದಾನವರೆಗೆ ರಸ್ತೆ ವಿಭಜಕ, ಬೀದಿದೀಪ ಅಳವಡಿಕೆ ಕಾರ್ಯ ನಡೆಯುತ್ತಿದೆ. ಈಗ ಜೆಪಿ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ರಾಜಕೀಯದಲ್ಲಿ ಟೀಕೆ, ಟಿಪ್ಪಣೆ ಬರುವುದು ಸಹಜ. ಹಾಗಂತ ಕೆಲಸ ನಿಲ್ಲಿಸಲು ಆಗಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಲಾರೆ. ಎಲ್ಲ ವಾರ್ಡ್‌ಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಗ್ರಾಮೀಣ ಭಾಗಕ್ಕೂ ಕುಡಿವನೀರು, ಸಿಸಿ ರಸ್ತೆ ಸೇರಿ ವಿವಿಧ ಕೆಲಸಕ್ಕೆ ಅನುದಾನ ನೀಡಲಾಗಿದೆ. ಜನರು ಕೆಲಸವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಲೋಕೋಪಯೋಗಿ ಎಡಿಇ ಬನ್ನಪ್ಪ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಮುಖಂಡರಾದ ನಾಗರಾಜ ಪಾಟೀಲ್, ಸಿದ್ದಣ್ಣ ಗಣೇಕಲ್, ದೊಡ್ಡ ರಂಗಣ್ಣ ಪಾಟೀಲ್, ಲಕ್ಷ್ಮಣ ಅಕ್ಕರಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net