ವರ ಮಹಾಲಕ್ಷ್ಮೀ ಸ್ವಾಗತಕ್ಕೆ ಸಿದ್ಧತೆ

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಲಿಂಗಸುಗೂರು ಬಸ್ ನಿಲ್ದಾಣ ರಸ್ತೆಯಲ್ಲಿ ಮಹಿಳೆಯರು ಹೂ ಹಾಗೂ ಅಲಂಕಾರ ಸಾಮಗ್ರಿ ಖರೀದಿಸಿದರು.
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಲಿಂಗಸುಗೂರು ಬಸ್ ನಿಲ್ದಾಣ ರಸ್ತೆಯಲ್ಲಿ ಮಹಿಳೆಯರು ಹೂ ಹಾಗೂ ಅಲಂಕಾರ ಸಾಮಗ್ರಿ ಖರೀದಿಸಿದರು.
Published on

ಲಿಂಗಸುಗೂರು: ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಸಡಗರದಿಂದ ಆಚರಿಸಲು ತಾಲೂಕಿನ ಜನತೆ ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ. ಗುರುವಾರ ಹೂ, ಹಣ್ಣು, ತರಕಾರಿ ಸೇರಿದಂತೆ ಹಬ್ಬದ ನಾನಾ ಸಾಮಗ್ರಿಗಳನ್ನು ಖರೀದಿಸಿದರು.

ಕನಕಾಂಬರ, ಮಲ್ಲಿಗೆ, ಸೇವಂತಿ ಹೂವುಗಳ ಬೆಲೆ ದುಬಾರಿಯಾಗಿದೆ. ಪ್ರತಿದಿನ 20ರೂ.ಗೆ ಒಂದು ಮೊಳ ಮಾರುತ್ತಿದ್ದ ಹೂವುಗಳ ದರ 50 ರೂ. ದಾಟಿತ್ತು. ಕ್ಯಾದಗಿ ಒಂದು ಕಟ್ಟಿಗೆ 200 ರೂ., ಬೊಕ್ಕೆ 250 ರೂ., ಗುಲಾಬಿ ಒಂದಕ್ಕೆ 20 ರೂ.,ಗೆ ಮಾರಾಟ ಮಾಡಲಾಯಿತು. ಲಕ್ಷ್ಮೀ ಮೂರ್ತಿಯ ಸೊಬಗು ಹೆಚ್ಚಿಸುವ ಡೇರೆ, ತಾವರೆ, ಕಮಲ, ಚೆಂಡುಹೂಗಳ ದರವೂ ಹೆಚ್ಚಳವಾಗಿತ್ತು.
ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಲೆಗಳ ದರವೂ ಹೆಚ್ಚಾಗಿತ್ತು. ಬಟ್ಟೆ, ಬಳೆ ಹಾಗೂ ಕಿರಾಣಿ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ದೇವಿಯ ಕಳಸಕ್ಕೆ ಉಡಿಸುವ ಸೀರೆ, ಕುಪ್ಪಸ ಖರೀದಿಯಲ್ಲಿ ಮಹಿಳೆಯರು ತೊಡಗಿದ್ದರು. ಆಭರಣ ಅಂಗಡಿಗಳಲ್ಲೂ ಜನರು ಸೇರಿದ್ದರು. ತಾಂಬೂಲ ನೀಡಲು ಅರಿಶಿಣ, ಕುಂಕುಮ, ಬಾಳೆಹಣ್ಣು, ಎಲೆ, ಅಡಿಕೆ ಕೂಡ ಖರೀದಿ ಮಾಡಲಾಯಿತು. ಪಟ್ಟಣದ ಮುಖ್ಯ ಬಜಾರ್, ಗಡಿಯಾರ ಚೌಕ, ಬಸ್ ನಿಲ್ದಾಣ ಚೌಕದಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ನಡೆಯಿತು. ಬೆಳಿಗ್ಗೆಯಿಂದ ಸಂಜೆವರೆಗೆ ಮಾರುಕಟ್ಟೆಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ಸಿಕ್ಕು ಕಂಡುಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net