_1786114865830.webp?w=480&auto=format%2Ccompress&fit=max)
_1786114865830.webp?w=480&auto=format%2Ccompress&fit=max)
ರಾಯಚೂರು
ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆ.8 ಮತ್ತು 9 ರಂದು ಮೊದಲ ಬಾರಿಗೆ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ನಗರದ ಜಿಲ್ಲಾ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆಂದು ಅಸೋಸಿಯೇಷನ್ ಅಧ್ಯಕ್ಷ ಬೆಲ್ಲಂ ಕಿರಣ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐಪಿಎಲ್ ಮಾದರಿಯಲ್ಲಿ ಕ್ರೀಡಾಪಟುಗಳನ್ನು ಜು.26 ರಂದು ನಡೆದ ಹರಾಜ ಪ್ರಕ್ರಿಯೆಯಲ್ಲಿ 8 ತಂಡಗಳನ್ನು ರಚಿಸಲಾಗಿದ್ದು, ಒಟ್ಟು 156 ಕ್ರೀಡಾಪಟುಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಬುಲ್ಸ್, ಪ್ಯಾಂಥರ್ಸ್, ಚೀತಾ, ಲಯನ್ಸದ್, ಈಗಲ್ಸ್, ಟೈಗರ್ಸ್, ರೈನೋಸ್, ಕೋಬ್ರಾಸ್ ತಂಡಗಳೆಂದು ಹೆಸರಿಸಲಾಗಿದೆ. ವಿಜೇತ ತಂಡಕ್ಕೆ ಒಂದು ಲಕ್ಷ ರೂ ನಗದು ಬಹುಮಾನ, ರನ್ನರ್ಸ್ ಆಪ್ ತಂಡಕ್ಕೆ 50 ಸಾವಿರ ರೂ ನಗದು ಹಣ ಹಾಗೂಇತರೆ ಕ್ರೀಡಾಪಟುಗಳಿಗೆ ಟ್ರೋಫಿ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ತಾಯಣಗೌಡ, ಚೇತನ್ ದೋಕಾ, ಅರ್ಜುನ, ರಾಮಣ್ಣ ಇದ್ದರು.