ಸಾಮೂಹಿಕ ವಿವಾಹಕ್ಕೆ ಇರಲಿ ಆದ್ಯತೆ

ಕುರ್ಡಿ ಗ್ರಾಮದಲ್ಲಿ ಘಡಿವಡಿಕೀಶ್ವರ ಮಠದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಕುರ್ಡಿ ಗ್ರಾಮದಲ್ಲಿ ಘಡಿವಡಿಕೀಶ್ವರ ಮಠದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
Published on
ಮಾನ್ವಿ: ಅದ್ದೂರಿ ಮದುವೆಗಳಿಂದ ಆರ್ಥಿಕ ಹೊರೆಯಾಗಲಿದ್ದು, ಸರಳ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡಬೇಕು ಎಂದು ರಾಯಚೂರಿನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕುರ್ಡಿ ಗ್ರಾಮದ ಘಡಿವಡಿಕೀಶ್ವರ ಮಠದ ಆವರಣದಲ್ಲಿ ಸೋಮವಾರ ದುಮತಿ ಸಕ್ರಪ್ಪ ತಾತನ 20ನೇ ಹಾಗೂ ಮಾತೋಶ್ರೀ ಮುತ್ತಮ್ಮ ತಾಯಿಯ 5ನೇ ವರ್ಷದ ಆರಾಧನೆ ನಿಮಿತ್ತ ಹಮ್ಮಿಕೊಂಡಿದ್ದ 5 ಜೋಡಿ ಉಚಿತ ಸಾಮೂಹಿಕ ವಿವಾಹ ಹಾಗೂ 108 ಸುಮಂಗಲಿಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಸಾಮೂಹಿಕ ವಿವಾಹದಲ್ಲಿ ಜೋಡಿಯಾಗುವವರು ಸಾಕ್ಷಾತ್ ಶಿವಪಾರ್ವತಿ ಸ್ವರೂಪರಾಗಿರುತ್ತಾರೆ. ಸಾವಿರಾರು ಜನರು, ಶ್ರೀಗಳು, ಶರಣರು, ಸಂತರ ಆಶೀರ್ವಾದದಿಂದ ದಾಂಪತ್ಯ ಜೀವನ ಸುಖಮಯವಾಗಿರಲಿದೆ ಎಂದರು. 
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ದುಂದು ವೆಚ್ಚವಿಲ್ಲದ ಸರಳ ವಿವಾಹಗಳಿಗೆ ಪ್ರಾಮುಖ್ಯ ನೀಡಬೇಕು. ಸಾಮೂಹಿಕ ವಿವಾಹದಲ್ಲಿ ಒಂದಾದ ದಂಪತಿಗಳು ಮಾದರಿಯಾಗುವಂತೆ ಜೀವನ ನಡೆಸಬೇಕು ಎಂದು ತಿಳಿಸಿದರು. ಬಿಚ್ಚಾಲಿ ಸಂಸ್ಥಾನಮಠದ ವೀರತಪಸ್ವಿ ವೀರಭದ್ರ ಶ್ರೀಗಳು ಆಶೀರ್ವಚನ ನೀಡಿದರು. 
ಘಡಿವಡಿಕೀಶ್ವರ ಮಠ ಯಲಗಟ್ಟಿಯ ವಡಿಕೆಪ್ಪ ತಾತ, ಶರಣಬಸಪ್ಪ ತಾತ, ಮಾತೋಶ್ರೀ ಪವಿತ್ರಮ್ಮ ತಾಯಿ, ಗಾರಲದಿನ್ನಿ ಶಿವಾನಂದ ಮಠದ ಮೌನೇಶ ಮಹಾರಾಜರು, ಗೋನವಾರ ಮಲ್ಲಯ್ಯ ತಾತ, ಶರಣೇಗೌಡ ಗಾರಲದಿನ್ನಿ, ಬುಗ್ಗಿ ಅಯ್ಯಪ್ಪತಾತ ಇತರರಿದ್ದರು. 

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net