ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ

ಈದ್ ಮಿಲಾದ್ ಅಂಗವಾಗಿ ಅರಕೇರಾದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.
ಈದ್ ಮಿಲಾದ್ ಅಂಗವಾಗಿ ಅರಕೇರಾದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.
Published on

ಅರಕೇರಾ: ಪಟ್ಟಣದಲ್ಲಿ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.

ಜಾಮೀಯಾ ಮಸೀದಿಯಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಸಣ್ಣ ಕಟಗರ ಓಣಿ, ದೇಸಾಯಿ ನಗರ, ಮಠದ ಓಣಿ, ಸತ್ಯಪ್ಪನ ಕಟ್ಟೆ, ಮಹಾತ್ಮ ಗಾಂಧಿ ಸರ್ಕಲ್, ಭಗಮ್ಮ ದೇವಸ್ಥಾನದ ಮಾರ್ಗವಾಗಿ ಜಾಮೀಯಾ ಮಸೀದಿವರೆಗೆ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು. ಹಾಫಿಸಾಬ್ ಹುಸೇನ್ ಬಾಷ, ಖಾಜಿಸಾಬ್ ಅಲೀಂ ಜಾನಿ, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಜಲೀಲ್ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net