ಮಳೆಗಾಗಿ ಪ್ರಾರ್ಥಿಸಿ ದೇವರಿಗೆ ಜಲಾಭಿಷೇಕ

ಸಿಂಧನೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿವಿಧ ದೇವಾಲಯಗಳಿಗೆ ಜಲಾಭಿಷೇಕ ಮಾಡಲು ತೆರಳಿದ ಮಕ್ಕಳು.
ಸಿಂಧನೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿವಿಧ ದೇವಾಲಯಗಳಿಗೆ ಜಲಾಭಿಷೇಕ ಮಾಡಲು ತೆರಳಿದ ಮಕ್ಕಳು.
Published on
ಸಿಂಧನೂರು: ಸಮೃದ್ಧ ಮಳೆ, ಬೆಳೆಯಾಗಲೆಂದು ಪ್ರಾರ್ಥಿಸಿ ನಗರದ ನಾಗಪ್ಪಕಟ್ಟೆಯ ಈಶ್ವರಲಿಂಗಕ್ಕೆ ಮಕ್ಕಳು ಭಾನುವಾರ 101 ಕೊಡ ಜಲಾಭಿಷೇಕ ಮಾಡಿದರು. 
ನಂತರ ಆದಿಶೇಷ, ಸುಂಕ್ಲಮ್ಮ ದೇವಸ್ಥಾನ ಹಾಗೂ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನಗಳಿಗೆ 20 ಮಕ್ಕಳು 101 ಕೊಡ ನೀರು ಹಾಕಿ, ಮಳೆಗಾಗಿ ಪ್ರಾರ್ಥಿಸಿದರು. ಶಿವಸಿದ್ದಪ್ಪ, ಆಂಜನೇಯ, ಹನುಮೇಶ, ದೇವರಾಜ, ಅಮರೇಶ, ಶರತ್, ಶಶಿ, ಮಹಾದೇವಪ್ಪ, ವೀರೇಶ, ತನ್ಮಯ, ಸಂತು, ಪ್ರಿಯಾ, ಸಹನಾ, ಭಾವನಾ, ನಿಹಾರಿಕಾ, ಗಣೇಶ, ಅಕ್ಷಯ್, ಸಾಯಿ, ನವೀನ್, ಪ್ರಮೋದ್, ಸುಷ್ಮಿತಾ, ನಿಹಾಲ್, ಲಿಂಗರಾಜ, ವರುಣ್, ಬನಶ್ರೀ, ಸಾನ್ನಿಧ್ಯ, ಶ್ರೀಶೈಲ, ಆರಾಧ್ಯ, ಮಯೂರ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net