ತಾಲೂಕಿನ ಶಕ್ತಿನಗರದ ಆರ್‌ಟಿಪಿಎಸ್‌ನ 3 ನೇ ಹಾಗೂ 6 ನೇ ಘಟಕ ಮತ್ತು ವೈಟಿಪಿಎಸ್‌ನ 2ನೇ ಘಟಕದಲ್ಲಿ ತಾಂತ್ರಿಕ ದೋಷದಿಂದ ಸೋಮವಾರ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದೆ.
ಕಳೆದ ಅನೇಕ ತಿಂಗಳಿಂದ ಆರ್‌ಟಿಪಿಎಸ್‌ನ ಒಂದನೇ ಘಟಕವೂ ನಿರ್ವಹಣೆಯ ಕಾರಣಕ್ಕೆ ಬಂದ್ ಹಿನ್ನೆಲೆ ಒಟ್ಟು ನಾಲ್ಕು ಘಟಕಗಳು ಸ್ಥಗಿತವಾಗಿದ್ದು, ಇದರಿಂದ ಥರ್ಮಲ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ತೀವ್ರ ಕುಸಿತವಾಗಿದೆ.
ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್‌ನಲ್ಲಿ 972 ಮೆವಾ ಗೆ ಉತ್ಪಾದನೆ ಕುಸಿದಿದ್ದು, ರಾಜ್ಯದ ವಿದ್ಯುತ್ ಬೇಡಿಕೆ 18000 ಮೆವಾ ಗಡಿ ದಾಟಿರುವುದರಿಂದ ಒತ್ತಡದಲ್ಲಿ ಕೆಪಿಸಿ ಇದೆ. ಇದರಿಂದ ಕಳೆದ ಎರಡು ದಿನಗಳಿಂದ ರಾಜ್ಯದ ಉತ್ತರ ಭಾಗದಲ್ಲಿ ವಿದ್ಯುತ್ ಕಡಿತ ಹೆಚ್ಚಳವಾಗಿದೆ.