ವಾರ್ಡ್‌ನಲ್ಲಿ ಜನರು ಓಡಾಡಲು, ವಾಹನ ಸಂಚಾರಕ್ಕೆ ನಿರ್ಮಿಸಿರುವ ರಸ್ತೆ ಹದಗೆಟ್ಟಿದೆ. ರಸ್ತೆ ಮಧ್ಯದಲ್ಲಿ 10 ಅಡಿ ಆಳದ ಗುಂಡಿ ತೋಡಿ ಬಿಡಲಾಗಿದೆ. ಮಳೆ, ಕೊಳಚೆ ನೀರು ತುಂಬಿದ್ದರಿಂದ ಅನಾಹುತಕ್ಕೆ ಎಡೆಮಾಡಿಕೊಟ್ಟಿದೆ. ಮುಂದಾಗಬಹುದಾದ ಅವಘಡ ತಪ್ಪಿಸಲು ಪುರಸಭೆ ಅಧಿಕಾರಿಗಳು ಮುಂದಾಗಿಲ್ಲ ಎಂದು ನಿವಾಸಿಗಳು ದೂರುತ್ತಾರೆ.