_1782485477666.webp?w=480&auto=format%2Ccompress&fit=max)
_1782485477666.webp?w=480&auto=format%2Ccompress&fit=max)
ರಾಯಚೂರು ಮುಂಗಾರು ಸಾಂಸ್ಕೃತಿಕ ಹಬ್ಬದ ರುವಾರಿ ಎ.ಪಾಪಾರೆಡ್ಡಿಯವರ ಪತ್ನಿ ಪಾವರ್ತಮ್ಮ ನಿಧನದಿಂದ ಮುನ್ನೂರು ಕಾಪು ಸಮಾಜದಿಂದ ಆಚರಣೆ ಮಾಡಲಾಗುತ್ತಿರುವ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ತಾತ್ಕಾಲಿಕ ಮುಂದೂಡಲಾಗಿದೆ ಎಂದು ಮುನ್ನೂರು ಕಾಪು ಸಮಾಜದ ಕಾಯಾಧ್ಯಕ್ಷ ಉಟ್ಕೂರು ಕೃಷ್ಣಮೂರ್ತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದ್ದು, ಈ ವರ್ಷ ಆಚರಣೆ ಮಾಡದೇ ಮುಂದಿನ ದಿನಗಳಲ್ಲಿ ನಡೆಸಲು ನಿರ್ಣಯಿಸಲಾಗಿದೆ. ಸಮಾಜದಿಂದ ಆಚರಣೆಗೆ ಸಿದ್ದತೆಗಳು ನಡೆದಿದ್ದವು. ಆದರೆ ಕಾರ್ಯಕ್ರಮದ ರುವಾರಿಯಾಗಿರುವ ಎ.ಪಾಪಾರೆಡ್ಡಿ ಅನುಪಸ್ಥಿತಿಯಲ್ಲಿ ಆಚರಣೆ ಮಾಡಲು ಸಮಾಜ ನಿರ್ಧರಿಸಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಶ್ರೀನಿವಾಸರೆಡ್ಡಿ, ಜಿ. ಪ್ರತಾಪರೆಡ್ಡಿ, ಬಂಗಿ ನರಸರೆಡ್ಡಿ, ಯು.ಗೋವಿಂದರೆಡ್ಡಿ, ಎಸ್. ಜನಾರ್ಧನರೆಡ್ಡಿ, ಮಲ್ಲೇಶಪ್ಪ, ಪುಂಡ್ಲ ರಾಜೇಂದ್ರರೆಡ್ಡಿ ಇದ್ದರು.