ಹತ್ತಿಗುಡ್ಡ ಗ್ರಾಮದಲ್ಲಿ ಪೊಲೀಸ್ ಪಥಸಂಚಲನ

ಹತ್ತಿಗುಡ್ಡ ಗ್ರಾಮದಲ್ಲಿ ಬಿಲ್ವಪತ್ರೆ ಬಸವೇಶ್ವರ ಜಾತ್ರೆ ಅಂಗವಾಗಿ ಶುಕ್ರವಾರ ತುರ್ವಿಹಾಳ ಠಾಣೆ ಪಿಎಸ್‌ಐ ಸುಜಾತಾ ಡಿ.ಎನ್. ನೇತೃತ್ವದಲ್ಲಿ ಎರಡು ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳಿಂದ ಪಥ ಸಂಚಲನ ನಡೆಸಲಾಯಿತು.
ಹತ್ತಿಗುಡ್ಡ ಗ್ರಾಮದಲ್ಲಿ ಬಿಲ್ವಪತ್ರೆ ಬಸವೇಶ್ವರ ಜಾತ್ರೆ ಅಂಗವಾಗಿ ಶುಕ್ರವಾರ ತುರ್ವಿಹಾಳ ಠಾಣೆ ಪಿಎಸ್‌ಐ ಸುಜಾತಾ ಡಿ.ಎನ್. ನೇತೃತ್ವದಲ್ಲಿ ಎರಡು ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳಿಂದ ಪಥ ಸಂಚಲನ ನಡೆಸಲಾಯಿತು.
Published on
ಸಿಂಧನೂರು: ತುರ್ವಿಹಾಳ ಸಮೀಪದ ಹತ್ತಿಗುಡ್ಡ ಗ್ರಾಮದಲ್ಲಿ ಬಿಲ್ವಪತ್ರೆ ಬಸವೇಶ್ವರ ಜಾತ್ರೋತ್ಸವ ಅಂಗವಾಗಿ ಶುಕ್ರವಾರ ತುರ್ವಿಹಾಳ ಠಾಣೆ ಪಿಎಸ್‌ಐ ಸುಜಾತಾ ಡಿ.ಎನ್. ನೇತೃತ್ವದಲ್ಲಿ ಎರಡು ಕೆಎಸ್‌ಆರ್‌ಪಿ ಬೆಟಾಲಿಯನ್‌ಗಳಿಂದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. 
ಪಿಎಸ್‌ಐ ಸುಜಾತಾ ಮಾತನಾಡಿ, ಗ್ರಾಮದಲ್ಲಿ ಬಿಲ್ವಪತ್ರೆ ಬಸವೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಶಿಸ್ತು, ಶಾಂತಿ ಮತ್ತು ಸೌಹಾರ್ದ ಕಾಪಾಡಲು ಪೂರ್ವಭಾವಿಯಾಗಿ ಪಥ ಸಂಚಲನ ನಡೆಸಲಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. 
ಜಾತ್ರೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುವುದು, ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net