ಅಪರಾಧದ ಮೇಲೆ ಪೊಲೀಸ್ ಹದ್ದಿನ ಕಣ್ಣು

ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಅಳವಡಿಕೆ ಮಾಡಿದ ಸಿಸಿಟಿವಿ ಕ್ಯಾಮೆರಾ
ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಅಳವಡಿಕೆ ಮಾಡಿದ ಸಿಸಿಟಿವಿ ಕ್ಯಾಮೆರಾ
Published on
ರಾಯಚೂರು
ಅಪರಾಧ ಮತ್ತು ಅಪಘಾತ ಪತ್ತೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆ ಮತ್ತು ನಗರಗಳಲ್ಲಿ ನಿಗಾವಹಿಸಲು ಸಾರ್ವಜನಿಕ ಹಾಗೂ ಕೆಕೆಆರ್‌ಡಿಬಿಯಿಂದ ಒಟ್ಟು 17191 ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಇಡೀ ಜಿಲ್ಲೆಯ ಮೇಲೆ ಪೋಲಿಸ್ ಇಲಾಖೆ ಹದ್ದಿನ ಕಣ್ಣು ಇಡಲು ಮುಂದಾಗಿದೆ.


ಜಿಲ್ಲೆಯಲ್ಲಿ ನಾಗರಿಕರ ಸುರಕ್ಷತೆ ಮತ್ತು ಕಾನೂನು- ಸುವ್ಯವಸ್ಥೆ ವ್ಯವಸ್ಥೆ ಬಲಪಡಿಸಲು ಜತೆೆಗೆ ಯಾವುದೇ ಅಪರಾಧ ಚಟುವಟಿಕೆ ನಡೆಯದಂತೆ ತಡೆಹಿಡಿಯಲು ಸಿಸಿಟಿವಿ ಕ್ಯಾಮೆರಾ ಮರಾ ಕಣ್ಣಾವಲಿನಲ್ಲಿ ಇಡಲು ಪೋಲಿಸ್ ಇಲಾಖೆಯ ಮಹತ್ವದ ಹೆಜ್ಜೆಯನ್ನಿರಿಸಿದ್ದು ಸಾರ್ವಜನಿಕರಿಂದ ಹರ್ಷವ್ಯಕ್ತವಾಗುತ್ತಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿನ ಜನ ನಿಬಿಡ ಪ್ರದೇಶಗಳು ಸೇರಿದಂತೆ ನಗರ ಸಂಪರ್ಕಿಸುವ ಹೆದ್ದಾರಿಗಳಲ್ಲಿ ನಿಗಾವಹಿಸಲು ಅತ್ಯಾಧುನಿಕ ತಂತ್ರಜ್ಞಾನದ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಇಡೀ ನಗರದ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ನಗರ ಸೇರಿದಂತೆ ಜಿಲ್ಲಾಧ್ಯಂತ ಜನಸಂಖ್ಯೆಯೊಂದಿಗೆ ವಾಹನಗಳ ಸಂಚಾರ ಕೂಡ ಹೆಚ್ಚಾಗಿದೆ. ನಗರದಲ್ಲಿನ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಯೊಂದಿಗೆ ಅಪರಾಧ ಮತ್ತು ಅಪಘಾತದ ಮೇಲೆ ನಿಗಾವಹಿಸಲು 66 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ನಗರ ಪ್ರದೇಶದೊಂದಿಗೆ ಹೊರ ವಲಯದಲ್ಲಿಯು ಸಹ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ.

ಎಷ್ಟು ಸಿಸಿ ಕ್ಯಾಮೆರಾಗಳು ಅಳವಡಿಕೆ

ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ರಾಯಚೂರು ನಗರಕ್ಕೆ, ಅಕ್ರಮ ಚಟುವಟಿಕೆಗಳು ತಳ ಊರದಿರಲಿ ಎಂಬ ಆಶಾಭಾವನೆಯೊಂದಿಗೆ ಕೆಕೆಆರ್‌ಡಿಬಿಯಿಂದ ಜಿಲ್ಲೆಯ ವಿವಿಧ ಮುಖ್ಯರಸ್ತೆಗಳಲ್ಲಿ 66 ಕ್ಯಾಮೆರಾಗಳು, ವಿವಿಧ ಪೊಲೀಸ್ ಠಾಣೆಯಲ್ಲಿ 112 ಕ್ಯಾಮೆರಾಗಳು, ಅಧಿಕಾರಿಗಳ ಮುತುವರ್ಜಿಯಿಂದ ಸದರ್ ಬಜಾರ್ ಠಾಣೆಯಲ್ಲಿ 15 ಕ್ಯಾಮೆರಾ,ನೇತಾಜಿ ಠಾಣೆ ವ್ಯಾಪ್ತಿಯಲ್ಲಿ 03 ಕ್ಯಾಮೆರಾ,ಸಿಂಧನೂರು ನಗರದಲ್ಲಿ 140 ಕ್ಯಾಮೆರಾ, ಸಿಂಧನೂರು ಗ್ರಾಮೀಣದಲ್ಲಿ 02, ಬಳಗನೂರು ಠಾಣೆಯಲ್ಲಿ 07 ಹಾಗೂ ಮುದಗಲ್ ಠಾಣೆ ವ್ಯಾಪ್ತಿಯಲ್ಲಿ 28 ಕ್ಯಾಮೆರಾಗಳು ಮತ್ತು ಪೊಲೀಸ್ ಇಲಾಖೆಯ ಮನವಿ ಮೇರೆಗೆ ವಿವಿಧ ಖಾಸಗಿ ಅಂಗಡಿಗಳಲ್ಲಿ 16818 ಕ್ಯಾಮೆರಾಗಳನ್ನು ಅಂಗಡಿ ಮಾಲೀಕರು ಸೇರಿ ಒಟ್ಟು 17191 ಸಿಸಿ ಟಿವಿ ಕ್ಯಾಮೆರಾಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸೆರೆಯಾಗುವ ದೃಶ್ಯಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ಟ್ರಾಫಿಕ್ ಆಟೋಮೇಷನ್ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ, ವಾಹನದ ನೋಂದಣಿ ಸಂಖ್ಯೆ ಗುರುತಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಸರ್ವರ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದರಿಂದ ತಪಾಸಣೆ ವೇಳೆ ಪೊಲೀಸರಿಗೆ ಬೇರೆ ಎಲ್ಲಾದರೂ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂದರೆ ದಂಡ ವಿಧಿಸುತ್ತಿದ್ದಾರೆ.



ಪೊಲೀಸರಿಗೆ ತಪ್ಪಿದ ತಲೆನೋವು
ಜಿಲ್ಲೆಯಲ್ಲಿ ಈ ಹಿಂದೆ ನಡೆದ ಸಮಾಜ ಸ್ವಾಸ್ಥ್ಯ ಹಾಳು ಮಾಡುವಂತಹ ಘಟನೆಗಳು ನಡೆದರೂ, ಸಿಸಿಟಿವಿ ದೃಶ್ಯಾವಳಿಗಳು ಇಲ್ಲದಿರುವುದರಿಂದ ಪತ್ತೆ ಹಚ್ಚಲು ತಿಣುಕಾಡುವಂತಹ ಪರಿಸ್ಥಿತಿ ಸದ್ಯ ಪೊಲೀಸರಿಗೆ ಎದುರಾಗಿದ್ದು ಆದರೆ ಸಿಸಿ ಕ್ಯಾಮೆರಾ ಉಪಯೋಗವಾಗದೆ ಇರುವುದರಿಂದ ಪ್ರತಿ ನಿತ್ಯ ಪೊಲೀಸರಿಗೆ ತಲೆ ನೋವು ಉಂಟಾಗಿತ್ತು,
ರಾಯಚೂರು ಉಪ ವಿಭಾಗಕ್ಕೆ ಡಿವೈಎಸ್ಪಿ ಶಾಂತವೀರಾ ಈ. ಅಧಿಕಾರ ವಹಿಸಿಕೊಂಡ ನಂತರ ಜನ ಸಾಂದ್ರತೆ ಹೆಚ್ಚಳವಾದ ಪ್ರದೇಶದಲ್ಲಿ ಹಾಗೂ ಪ್ರತಿಯೊಂದ ಅಂಗಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ಜಾಗೃತಿ ಜತೆಗೆ ಸುಮಾರು 3 ಸಾವಿರ ಅಂಗಡಿ ಸಿಸಿ ಕ್ಯಾಮೆರ ಅಳವಡಿಕೆ ಮಾಡಲು ನೋಟಿಸ್ ನೀಡಿದ ನಂತರ ಪ್ರತಿಯೊಂದ ಅಂಗಡಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದ್ದರಿಂದ ಇಚೇಗೆ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ.

ಜಿಲ್ಲೆಯಲ್ಲಿ ಅಪರಾಧ ಮತ್ತು ಅಪಘಾತ ಪತ್ತೆ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆ ಮತ್ತು ನಗರಗಳಲ್ಲಿ ಸಾರ್ವಜನಿಕ ಹಾಗೂ ಕೆಕೆಆರ್‌ಡಿಬಿಯಿಂದ ಒಟ್ಟು 17191 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದ್ದು, ಇದರಿಂದ ಅಪರಾಧ
ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಸಹಾಯವಾಗಿದೆ.

ಅರುಣಾಂಗ್ಶು ಗಿರಿ ಎಸ್ಪಿ ರಾಯಚೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net