ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ತಪಾಸಣೆ ನಡೆದಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆಯಾಗಿರುವ ಶಂಖೆಯಿದ್ದು, ತಪಾಸಣೆ ನಡೆಯುತ್ತಿದೆ. ಒಂದು ವೇಳೆ ಬಾಂಬ್ ಬೆದರಿಕೆ ಕರೆ ಅಥವಾ ಇಮೇಲ್ ಮೂಲಕ ಬಂದಿದ್ದರೆ ಅದನ್ನು ದಾಖಲೆಯಾಗಿರಿಸಿ, ಸದರ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಈಗಾಗಲೇ ನ್ಯಾಯಾಲಯ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ.