ಜೂ.19 ರಂದು ಪ್ರಧಾನಿಯಿಂದ ಸಂವಾದ

NIRAJ-KUMAR)
NIRAJ-KUMAR)
Published on
ರಾಯಚೂರು ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆಯಡಿ ಉದ್ಯೋಗ ಮತ್ತು ಉದ್ಯೋಗ ದಾತರಿಗೆ ಪ್ರೋತ್ಸಾಹಿಸುವ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಜೂ.19ರಂದು ನಗರ ನವೋದಯು ವೈಧ್ಯಕೀಯ ಕಾಲೇಜಿನಲ್ಲಿ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ನೇರ ಸಂವಾದ ನಡೆಯಲಿದೆಂದು ಇಪಿಎಫ್‌ಓ ಪ್ರಾದೇಶಿಕ ಆಯುಕ್ತ ನೀರಜಕುಮಾರ ತಿಳಿಸಿದರು.
ನಗರದ ಇಪಿಎಫ್‌ಓ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ದೇಶದ ಪ್ರದಾನಿ ಮೋದಿಯವರು ನಡೆಸಲಿರುವ ನರೇಂದ್ರ ಸಂವಾದ ಕಾರ್ಯಕ್ರಮ ನೇರ ಪ್ರಸಾರ ನಡೆಸಲಾಗುತ್ತದೆ. ಉದ್ಯೋಗದಾತರು, ಉದ್ಯೋಗಿಗಳು ಭಾಗವಹಿಸುವಂತೆ ಮನವಿ ಮಾಡಿದರು. ರಾಯಚೂರು, ಬಾಗಲಕೋಟೆ ಮತ್ತು ಯಾದಗಿರಿ ಜಿಲ್ಲೆಗಳ ಒಳಗೊಂಡ ಪ್ರಾದೇಶಿಕ ಕಚೇರಿ ವ್ಯಾಪ್ತಿ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದರು. ದೇಶದ 200 ಕೇಂದ್ರಗಳಲ್ಲಿ ನಡೆಯಲಿರುವ ನೇರ ಪ್ರಸಾರದಲ್ಲಿ ರಾಯಚೂರು ಕೇಂದ್ರವೂ ಒಂದಾಗಿದೆ ಎಂದರು.
ಎರಡು ಹಂತದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಭವಿಷ್ಯ ನಿಧಿ ನೊಂದಾಯಿಸಿಕೊಳ್ಳುವ ಹೊಸ ನೌಕರರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಆರು ತಿಂಗಳ ಸೇವೆ ನಂತರ ಇಪಿಎಫ್ ಖಾತೆಗೆ 15 ಸಾವಿರ ರೂಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹೊಸದಾಗಿ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರಿಗೆ ಒಂದು ಲಕ್ಷ ವೇತನ ಹೊಂದಿರುವವರಿಗೆ ಪ್ರತಿ ತಿಂಗಳು 3 ಸಾವಿರ ರೂ ಕನಿಷ್ಟ ಆರು ತಿಂಗಳವರೆಗೆ ಪ್ರೋತ್ಸಾಹಧನ ವಿತರಿಸಲಾಗುತ್ತದೆ. ಉದ್ಯೋಗದಾತರು ಸ್ವಯಂಪ್ರೇರಿತವಾಗಿ ಹೊಸದಾಗಿ ಉದ್ಯೋಗ ಸೃಷ್ಟಿಸಿರು ಮಾಹಿತಿಯನ್ನು ನೀಡಿದರೆ ಮಾತ್ರ ಯೋಜನೆಯಡಿ ಪ್ರೋತ್ಸಾಹಧನ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅನುಷ್ಠಾನಾಧಿಕಾರಿ ಶರಣಬಸವ, ಲೆಕ್ಕಾಧಿಕಾರಿ ರಾಘವೇಂದ್ರರಾವ್ ಕುಲ್ಕರ್ಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net