ಐದಾರು ತಿಂಗಳಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣ

ಅಬ್ದುಲ್ ಗಫೂರ್‌ಸಾಬ್
ಅಬ್ದುಲ್ ಗಫೂರ್‌ಸಾಬ್
Published on
ಮಾನ್ವಿ: ಪಟ್ಟಣದಲ್ಲಿ ಶಾಶ್ವತ ಕುಡಿವ ನೀರಿನ ಕೆರೆಯಿದ್ದು, ಕೆಲ ವಾರ್ಡ್‌ಗಳಲ್ಲಿ ಬಿಟ್ಟರೆ ಬಹುತೇಕ ಕಡೆ ನೀರಿನ ಸಮಸ್ಯೆ ಇಲ್ಲ ಎಂದು ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್ ಹೇಳಿದರು. 
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಪಟ್ಟಣದಲ್ಲಿ ಕುಡಿವ ನೀರಿನ ತೊಂದರೆಯಿದೆ ಎಂದು ಕೆಲವರು ವಿನಾಕಾರಣ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಪಟ್ಟಣದಲ್ಲಿ ಮುಖ್ಯ ರಸ್ತೆಯ ಕೆಲಸ ಆರಂಭವಾಗಿದ್ದರಿಂದ ನೀರಿನ ಪೈಪ್‌ಗಳು ಒಡೆದು ತೊಂದರೆಯಾಗಿದೆ. ಬಹುತೇಕ ವಾರ್ಡ್‌ಗಳಲ್ಲಿ ಎರಡ್ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಒಂದೆರಡು ವಾರ್ಡ್‌ಗಳಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದರಿಂದ 5-6 ದಿನಕೊಮ್ಮೆ ನೀರು ಪೂರೈಸಲಾಗುತ್ತಿದೆ. ಅಲ್ಲಿನ ಜನರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಜಯನಗರದಲ್ಲಿ 7 ಲಕ್ಷ ಲೀಟರ್ ಮತ್ತು ಎಪಿಎಂಸಿಯಲ್ಲಿ 12.5 ಲಕ್ಷ ಲೀಟರ್ ಕುಡಿವ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಪೈಪ್‌ಲೈನ್ ಕಾಮಗಾರಿ ಐದಾರು ತಿಂಗಳಲ್ಲಿ ಮುಗಿಯಲಿದ್ದು, ನಂತರ ಪ್ರತಿ ವಾರ್ಡ್‌ಗೆ ಪ್ರತಿದಿನ ನೀರು ಸರಬರಾಜು ಮಾಡಲಾಗುವುದು. 
ನೀರು ಬಿಟ್ಟಾಗ ಅನೇಕರು ನಲ್ಲಿಗಳಿಗೆ ಮೋಟಾರ್ ಹಚ್ಚುವುದರಿಂದ ಕೆಳಗಡೆ ಭಾಗದ ಮನೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಆದ್ದರಿಂದ ಎಲ್ಲರಿಗೂ ನೀರು ಸಿಗುವಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ ಅವರು, ಕುಡಿವ ನೀರಿನ ಸಮಸ್ಯೆ ಕುರಿತು ಗಮನಕ್ಕೆ ತಂದರೆ ಸಚಿವ, ಶಾಸಕರ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು. 
ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಬಿ.ಕೆ. ಅಮರೇಶಪ್ಪ, ಇದಾಯತ್ ಪಾಷಾ, ಶೇಕ್ ಸತ್ತಾರ್ ಬಂಗ್ಲೆವಾಲಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net