ಸಾರ್ವಜನಿಕರಿಂದಲೆ ಪೈಪ್‌ಲೈನ್ ದುರಸ್ತಿ

ಹಾಲಪೂರ ಗ್ರಾಮದಲ್ಲಿ ನೀರಿನ ಸಮಸ್ಯೆಯಾದ ಪ್ರಯುಕ್ತ ಸಾರ್ವಜನಿಕರು ಸ್ವಂತ ಹಣದಲ್ಲಿ ಪೈಪ್‌ಲೈನ್ ದುರಸ್ತಿ ಮಾಡಿಸಿದರು. ಈರನಗೌಡ ದಳಪತಿ, ಗೂಳಯ್ಯಸ್ವಾಮಿ, ಶಿವನಗೌಡ, ನಾಗೇಶ ನಾಯಕ, ನಾಗರಡ್ಡಿಗೌಡ, ಬಸನಗೌಡ ಮಾಪಾ, ಮುದುಕನಗೌಡ, ಬಸವಲಿಂಗ, ಮಹಾಂತೇಶ ಮರಾಠ, ಆದಪ್ಪ ತುಂಟಪೂರ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿ ನಿರ್ಲಕ್ಷೃ
  • ಕವಿತಾಳ, ಹಾಲಾಪೂರ, ಪೈಪ್‌ಲೈನ್ ದುರಸ್ತಿ
ಕವಿತಾಳ: ಹಾಲಾಪೂರದಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಗ್ರಾಪಂ ನಿರ್ಲಕ್ಷೃದಿಂದ ಒಡೆದ ಪೈಪ್‌ಲೈನ್ ಸಾರ್ವಜನಿಕರೇ ಹಣ ಸಂಗ್ರಹಿಸಿ ದುರಸ್ತಿಗೆ ಮುಂದಾದರು.
ಗ್ರಾಮದಲ್ಲಿದ್ದ ನೀರಿನ ಪೈಪ್‌ಲೈನ್ ಒಡೆದಿತ್ತು. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಗ್ರಾಪಂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಹೀಗಾಗಿ ಶಾಲೆಗೆ ಹಾಗೂ ಗ್ರಾಮದ ಇನ್ನಿತರ ವಠಾರಗಳಿಗೆ ಕುಡಿಯುವ ನೀರು ಸರಬರಾಜಾಗಲು ದುರಸ್ತಿ ಕಾರ್ಯ ಮಾಡಿಸಿದರು. ಈ ಕುರಿತು ಗ್ರಾಮಸ್ಥ ಬಸನಗೌಡ ಮಾಲಿಪಾಟೀಲ್ ಮಾತನಾಡಿ, ನಮ್ಮ ಗ್ರಾಪಂ ಇದ್ದರೂ ಇಲ್ಲದಂತಾಗಿದೆ. ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗಿದೆ ಬೆರೆ ಕೊಳವೆಬಾವಿ ಮುಖಾಂತರ ನೀರನ್ನು ಸರಬರಾಜು ಮಾಡುವ ಸಲುವಾಗಿ ಪೈಪ್‌ಲೈನ್ ಅಳವಡಿಸಿಕೊಡಲು ಮನವಿ ಮಾಡಿದರೆ, ಅಧಿಕಾರಿಗಳು ನಮ್ಮ ಮಾತು ಕೇಳದಿರುವುದರಿಂದ ನಾವೇ ಹಣ ಸಂಗ್ರಹಿಸಿ ಪೈಪ್ ಖರಿದಿಸಿ ಪೈಲ್‌ಲೈನ್ ಮಾಡಿಸಿದ್ದೇವೆ ಎಂದರು.
ಈರನಗೌಡ ದಳಪತಿ, ಗೂಳಯ್ಯಸ್ವಾಮಿ, ಶಿವನಗೌಡ, ನಾಗೇಶ ನಾಯಕ, ನಾಗರಡ್ಡಿ ಗೌಡ, ಮುದುಕನಗೌಡ, ಬಸವಲಿಂಗ, ಮಹಾಂತೇಶ ಮರಾಠ, ಆದಪ್ಪ ತುಂಟಪೂರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net