ಪೆಟ್ರೋಲ್ ಸರಬರಾಜು ವ್ಯತ್ಯಯ ಬಂಕ್ ಬಂದ್

ತಾಲೂಕಿನ ಗಿಲ್ಲೇಸುಗೂರು ಗ್ರಾಮದ ಪೆಟ್ರೋಲ್ ಬಂಕ್ ಬಂದ್ ಆಗಿರುವುದು.
ತಾಲೂಕಿನ ಗಿಲ್ಲೇಸುಗೂರು ಗ್ರಾಮದ ಪೆಟ್ರೋಲ್ ಬಂಕ್ ಬಂದ್ ಆಗಿರುವುದು.
Published on
ರಾಯಚೂರು ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇಂಧನ ಅನಿಲದ ಕೊರತೆಯಿಂದ ಜಿಲ್ಲೆಯ ಗಡಿ ಭಾಗದ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಇಲ್ಲದೆ ಬಂದ್ ಆಗಿವೆ.
ಜಿಲ್ಲೆಯಲ್ಲಿ ಒಂದೆಡೆ ಗೃಹ ಉಪಯೋಗಿ ಸಿಲೆಂಡರ್ ಸಮಸ್ಯೆ ಜತೆಗೆ ಇದೀಗ ಜನರಿಗೆ ಪೆಟ್ರೋಲ್ ಸಮಸ್ಯೆ ಎದುರಾಗಿದ್ದು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಗಡಿ ಭಾಗ ಹೊಂದಿಕೊಂಡಿರುವ ತಾಲೂಕಿನ ಶಕ್ತಿನಗರ, ಗಿಲ್ಲೇಸುಗೂರು,ಸಿಂಗನೋಡಿ ಗ್ರಾಮದಲ್ಲಿನ ಬಂಕ್‌ಗಳಲ್ಲಿ ಕಳೆದ ಒಂದು ವಾರದಿಂದ ಪೆಟ್ರೋಲ್ ಸರಬರಾಜು ಇಲ್ಲದೆ ಹಲವು ಎರಡು ದಿನಗಳಿಂದ ಪೆಟ್ರೋಲ್ ಬಂಕ್‌ಗಳು ಬಂದ್ ಅಗಿದ್ದು,
ಆಂಧ್ರ ಪ್ರದೇಶ ಹಾಗೂ ತೆಲಾಂಗಣದಲ್ಲಿ ಲೀಟರ್ ಪೆಟ್ರೋಲ್‌ಗೆ 112 ರೂಇರುವುದರಿಂದ ಅಲ್ಲಿನ ವಾಹನ ಸವಾರರು, ರಾಜ್ಯದ ಗಡಿ ಭಾಗದ ಬಂಕ್‌ಗಳಿಗೆ ಬಂದು ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಕಳೆದ ಎರಡು ದಿನಗಳಿಂದ ಗಡಿಭಾಗದ ಪೆಟ್ರೋಲ್ ಬಂಕ್‌ಗಳು ಬಂದಾಗಿವೆ.
ಇದರಿಂದ ಗ್ರಾಮೀಣ ಭಾಗದ ವಾಹನ ಸವಾರರು ರೈತರ ಪರದಾಡುತ್ತಿದ್ದಾರೆ. ಪೆಟ್ರೋಲ್ ಸಮಸ್ಯೆ ತಲೆದೂರಿದೆ ಎಂಬ ಅನುಮಾನ ಜಿಲ್ಲೆಯ ಜನರಿಗೆ ಕಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net