ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಲಿ

ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಎಚ್‌ಪಿವಿ ಲಸಿಕೆ ವಿತರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ರವಿಕಿರಣ ಉದ್ಘಾಟಿಸಿದರು. ಡಾ.ನಿರ್ಮಲಾದೇವಿ, ಆರೋಗ್ಯ ಇಲಾಖೆ ನೌಕರರಾದ ಶಿವಪ್ಪ, ಸೋಮಪ್ಪ, ಚನ್ನಬಸಯ್ಯ, ಗೀತಮ್ಮ, ಸಂಗಮ್ಮ, ಶಾರೋನ್, ಸುಲೋಚನಾ, ಯಾಸ್ಮಿನ್, ಜಯಶ್ರೀ, ರೂಪಾ ಇತರರಿದ್ದರು.
ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಎಚ್‌ಪಿವಿ ಲಸಿಕೆ ವಿತರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ರವಿಕಿರಣ ಉದ್ಘಾಟಿಸಿದರು. ಡಾ.ನಿರ್ಮಲಾದೇವಿ, ಆರೋಗ್ಯ ಇಲಾಖೆ ನೌಕರರಾದ ಶಿವಪ್ಪ, ಸೋಮಪ್ಪ, ಚನ್ನಬಸಯ್ಯ, ಗೀತಮ್ಮ, ಸಂಗಮ್ಮ, ಶಾರೋನ್, ಸುಲೋಚನಾ, ಯಾಸ್ಮಿನ್, ಜಯಶ್ರೀ, ರೂಪಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಟಿಎಚ್‌ಒ ಡಾ.ಬನದೇಶ್ವರ ಸಲಹೆ
  • ದೇವದುರ್ಗ ಎಚ್‌ಪಿವಿ ಲಸಿಕೆ ಜಾಗೃತಿ
ದೇವದುರ್ಗ: ಬಾಲಕ ಹಾಗೂ ಬಾಲಕಿಯರ ದೇಹದಲ್ಲಿ 14ನೇ ವರ್ಷದ ನಂತರ ಬದಲಾವಣೆ ಕಂಡುಬರಲಿದ್ದು ಯುವಜನತೆ ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಎಚ್‌ಪಿವಿ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಜನತೆ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡದಿದ್ದರೆ ಜನನಾಂಗದಲ್ಲಿ ತೊಂದರೆ, ರೋಗ ಹರಡುವ ಸಾಧ್ಯತೆಯಿದೆ. ಎಚ್‌ಪಿಐ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ.
ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಆಗಿ ಹಬ್ಬುವ ಸಾಧ್ಯತೆಯಿದೆ. 2024ರ ವರದಿ ಪ್ರಕಾರ ಭಾರತ ಗರ್ಭಕಂಠದ ಕ್ಯಾನ್ಸರ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಸುಮಾರು 78,499 ಗರ್ಭಕಂಠದ ಕ್ಯಾನ್ಸರ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 42,312 ಸಾವುಗಳು ಸಂಭವಿಸಿವೆ. ಆದ್ದರಿಂದ 14 ವರ್ಷದ ಬಾಲಕಿಯರು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಜತೆಗೆ ಎಚ್‌ಪಿವಿ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ಬಾಲಕಿಯರ ಸರ್ಕಾರಿ ಶಾಲೆಯ 85 ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕಲಾಯಿತು. ಸ್ತ್ರೀ ರೋಗ ತಜ್ಞ ಡಾ.ರವಿಕಿರಣ, ಡಾ.ನಿರ್ಮಲಾದೇವಿ, ಆರೋಗ್ಯ ಇಲಾಖೆ ನೌಕರರಾದ ಶಿವಪ್ಪ, ಸೋಮಪ್ಪ, ಚನ್ನಬಸಯ್ಯ, ಗೀತಮ್ಮ, ಸಂಗಮ್ಮ, ಶಾರೋನ್, ಸುಲೋಚನಾ, ಯಾಸ್ಮಿನ್, ಜಯಶ್ರೀ, ರೂಪಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net