ವಿಶೇಷ ನೇಮಕಾತಿಯಲ್ಲಿ ಸೇವೆ ಕಾಯಂಗೊಳಿಸಿ

ದೇವದುರ್ಗದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್‌ಗೆ ಅಖಿಲ ಕರ್ನಾಟಕ ಪರವಾನಗಿ ಭೂಮಾಪಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ರಾಜಶೇಖರ ಚವ್ಹಾಣ್, ಉಪಾಧ್ಯಕ್ಷರಾದ ನಿಂಗಪ್ಪ, ರಾಘವೇಂದ್ರ, ಪ್ರಮುಖರಾದ ಸಾಬಣ್ಣ, ಸುರೇಶ ಬಿ., ವಿನೋದಕುಮಾರ, ನರಸಪ್ಪ, ಮಂಜುನಾಥ, ಬಸವಲಿಂಗ ಇದ್ದರು.
ದೇವದುರ್ಗದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್‌ಗೆ ಅಖಿಲ ಕರ್ನಾಟಕ ಪರವಾನಗಿ ಭೂಮಾಪಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ರಾಜಶೇಖರ ಚವ್ಹಾಣ್, ಉಪಾಧ್ಯಕ್ಷರಾದ ನಿಂಗಪ್ಪ, ರಾಘವೇಂದ್ರ, ಪ್ರಮುಖರಾದ ಸಾಬಣ್ಣ, ಸುರೇಶ ಬಿ., ವಿನೋದಕುಮಾರ, ನರಸಪ್ಪ, ಮಂಜುನಾಥ, ಬಸವಲಿಂಗ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭೂ ದಾಖಲೆಗಳ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್‌ಗೆ ಮನವಿ
  • ದೇವದುರ್ಗ ಪರವಾನಗಿ ಭೂಮಾಪಕರ ಸಂಘ ಒತ್ತಾಯ
ದೇವದುರ್ಗ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಅನಿಲ್‌ಕುಮಾರ್‌ಗೆ ಅಖಿಲ ಕರ್ನಾಟಕ ಪರವಾನಗಿ ಭೂಮಾಪಕರ ಸಂಘ ಮನವಿ ಸಲ್ಲಿಸಿತು.
ಭೂಮಾಪಕರು ಹಲವು ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಪೋಡಿಮುಕ್ತ ಅಭಿಯಾನ, ದರಖಾಸ್ತು ಪೋಡಿ, ಸ್ವಾಮಿತ್ವ ಯೋಜನೆ, ಭೂ ಆಕಾರ ಬಂದು, ಡಿಜಿಟೈಜೇಷನ್, ಹದ್ದುಬಸ್ತು, ತತ್ಕಾಲ್‌ಪೋಡಿ, 11-ಇ ಸೇರಿ ಅನೇಕ ಕೆಲಸಗಳಿಗೆ ಭೂಮಾಪಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ.
ಸೂಕ್ತ ಸಂಭಾವನೆ ನೀಡುತ್ತಿಲ್ಲ. ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಿಶೇಷ ನೇಮಕಾತಿಯಡಿ ಪರವಾನಗಿ ಭೂಮಾಪಕರನ್ನು ಸರ್ಕಾರಿ ಸೇವೆಯಲ್ಲಿ ಸಕ್ರಮಗೊಳಿಸಬೇಕು. ನೌಕರರಿಗೆ ನೀಡುವ ಸೌಲಭ್ಯಗಳನ್ನು ಒದಗಿಸಬೇಕು. ನಿರ್ಲಕ್ಷಿಸಿದರೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಸಿದರು.
ಭೂಮಾಪಕರ ಸಂಘದ ವಿಭಾಗ ಪ್ರಧಾನ ಕಾರ್ಯದರ್ಶಿ ಆನಂದ ಛಲವಾದಿ, ತಾಲೂಕು ಅಧ್ಯಕ್ಷ ರಾಜಶೇಖರ ಚವ್ಹಾಣ್, ಉಪಾಧ್ಯಕ್ಷರಾದ ನಿಂಗಪ್ಪ, ರಾಘವೇಂದ್ರ, ಪ್ರಮುಖರಾದ ಸಾಬಣ್ಣ, ಸುರೇಶ ಬಿ., ವಿನೋದಕುಮಾರ, ನರಸಪ್ಪ, ಮಂಜುನಾಥ, ಬಸವಲಿಂಗ, ಮಲ್ಲಿಕಾರ್ಜುನಸ್ವಾಮಿ, ಪವನಕುಮಾರ್, ಕರಣ್‌ಕುಮಾರ ಪಾಟೀಲ್, ರಾಜು ಭವಾನಿ, ಬಸವರಾಜ, ಸುಮಯ್ಯ, ನಾಗರತ್ನ, ಗೌಸಿಯಾ ಬೇಗಂ, ಸುಮಿತ್ರಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net