ಎಚ್ಚರಕೆಯೊಂದಿಗೆ ಕರ್ತವ್ಯನಿರ್ವಹಿಸಿ

ಮಾನ್ವಿಯ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು. ಅಗ್ನಿಶಾಮಕ ಠಾಣಾಧಿಕಾರಿ ರಂಗಪ್ಪ, ಸಹಾಯಕ ಠಾಣಾಧಿಕಾರಿ ಹಾಜೀಮಿಯಾ ಇತರರಿದ್ದರು.
ಮಾನ್ವಿಯ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು. ಅಗ್ನಿಶಾಮಕ ಠಾಣಾಧಿಕಾರಿ ರಂಗಪ್ಪ, ಸಹಾಯಕ ಠಾಣಾಧಿಕಾರಿ ಹಾಜೀಮಿಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ತವ್ಯ

ಎಚ್ಚರಕೆಯೊಂದಿಗೆ ಕರ್ತವ್ಯನಿರ್ವಹಿಸಿ

ಮಾನ್ವಿ: ಮುಂಬೈನ ಬಂದರಿನ ನೌಕೆಯಲ್ಲಿ ನಡೆದ ಅಗ್ನಿ ದುರ್ಘಟನೆ ತಡೆಯುವ ವೇಳೆ ಸಂಭವಿಸಿದ ಭಾರಿ ಅಪಘಾತದಲ್ಲಿ ಹುತಾತ್ಮರಾದ 62 ಅಗ್ನಿಶಾಮಕ ವೀರರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲೂಕು ಅಗ್ನಿಶಾಮಕ ಠಾಣಾಧಿಕಾರಿ ರಂಗಪ್ಪ ಹೇಳಿದರು.
ಪಟ್ಟಣದ ಆಗ್ನಿಶಾಮಕ ಠಾಣೆಯಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು. ಯಾವುದೇ ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿಶಾಮಕದಳ ಜೀವ ಲೆಕ್ಕಿಸದೆ ಇನ್ನೊಬ್ಬರ ಪ್ರಾಣ ಉಳಿಸುತ್ತೇವೆ.
ಅಗ್ನಿ ಅನಾಹುತ, ನೀರಲ್ಲಿ ಮುಳುಗಿದರೆ, ಪ್ರವಾಹ ನಡೆದಾಗ ಅಗ್ನಿಶಾಮಕ ಸಿಬ್ಬಂದಿ ಸೈನಿಕರಂತೆ ಹೋರಾಡುತ್ತಾರೆ. ಇಂತಹ
ಸಾಹಸಕ್ಕೆ ಇಳಿದಾಗ ನಮ್ಮ ರಕ್ಷಣೆ ಬಗ್ಗೆ ಎಚ್ಚರ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಹಾಯಕ ಠಾಣಾಧಿಕಾರಿ ಹಾಜೀಮಿಯಾ ಮಾತನಾಡಿ, ತಾಲೂಕಿನಲ್ಲಿ ಅಗ್ನಿಶಾಮಕ ಇಲಾಖೆಯಿಂದ ಏ.14ರಿಂದ 20ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹ ನಡೆಯಲಿದೆ. ಈ ದಿನಗಳಲ್ಲಿ ಜಾಗೃತ ಸಮಾಜ-ಅಗ್ನಿ ಮುಂಜಾಗ್ರತೆಗಾಗಿ ಒಂದಾಗಿ ಎನ್ನುವ ಘೋಷವಾಕ್ಯದೊಂದಿಗೆ ಶಾಲೆ ಮತ್ತು ಆಸ್ಪತ್ರೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net