ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಜನರು ಫ್ಯಾನ್, ಎಸಿ ಇಲ್ಲದೆ ಬೆವರಿದರು. ಕೋಟೆ ಕಂದಕದ ಮುಂಭಾಗ, ಬಸ್ ನಿಲ್ದಾಣ ಹತ್ತಿರ, ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದ ಟಿಸಿ ಸೇರಿದಂತೆ ಫೀಡರ್ ಗಳ ದುರಸ್ತಿ, ಜೋತುಬಿದ್ದ ವೈರ್‌ಗಳ ಸ್ಥಳಾಂತರ, ಜಂಗಲ್ ಕಟಿಂಗ್ ಮತ್ತು ಟಿಸಿ, ವಿದ್ಯುತ್ ಕಂಬಗಳ ಬದಲಾವಣೆ ನಂತರ ಸಂಜೆ ವಿದ್ಯುತ್ ಪೂರೈಸಿದ್ದರಿಂದ ಜನ ನಿಟ್ಟುಸಿರು ಬಿಡುವಂತಾಯಿತು.