ಕೇಂದ್ರ ರೈಲ್ವೆ ನಿಲ್ದಾಣವನ್ನು ಕೇಂದ್ರ ಅಮೃತ ಯೋಜನೆಯಲ್ಲಿ ಅಭಿವೃದ್ದಿಗಾಗಿ ರೈಲ್ವೆ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಜತೆಗೆ ಇಚೇಗೆ ಟೆಂಡರ್ ಮುಗಿದ ಕಾರಣದಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಬಂದ್ ಮಾಡಲಾಗಿದ್ದು, ಈ ಹಿಂದೆ ಮಷಿನ್‌ಗಳ ಮೂಲಕ ಪ್ರಯಾಣಿಕರಿಗೆ 1 ರೂ.ಗೆ 300 ಮಿ.ಲೀ., 3 ರೂ.ಗೆ ಅರ್ಧ ಲೀಟರ, 5 ರೂ.ಕ್ಕೆ ಒಂದು ಲೀಟರ್, 8 ರೂ.ಗೆ ಎರಡು ಲೀಟರ್, 20 ರೂ.ಕ್ಕೆ ಐದು ಲೀಟರ್ ಶುದ್ಧ ನೀರನ್ನು ಕೊಡಲಾಗುತ್ತಿತ್ತು. ಅದೇ ರೀತಿ ಬಾಟಲ್ ಅಥವಾ ಗ್ಲಾಸ್ ಸಹಿತ 2 ರೂ.ಗೆ 300 ಮಿ.ಲೀ., 5 ರೂ.ಗೆ ಅರ್ಧ ಲೀಟರ್, 8 ರೂ.ಗೆ ಒಂದು ಲೀಟರ್, 12 ರೂ.ಗೆ ಎರಡು ಲೀಟರ್ ಶುದ್ಧ ನೀರನ್ನು ನೀಡಲಾಗುತ್ತಿತ್ತು. ಅಲ್ಲದೇ, ಪ್ರಯಾಣಿಕರೇ ದಿನದ 24 ಗಂಟೆ 5 ರೂ.ಮುಖ ಬೆಲೆಯ ನಾಣ್ಯವನ್ನು ಮಷಿನ್‌ನಲ್ಲಿ ಹಾಕಿ 1 ಲೀಟರ್ ನೀರನ್ನು ಪಡೆಯುತ್ತಿದ್ದರು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾಚರಣೆ ನಿಲ್ಲಿಸಿರುವುದರಿಂದ ಹಾಳಾಗುತ್ತಿವೆ. ನಾಣ್ಯ ಹಾಕಿ ನೀರು ತುಂಬುವ ಸ್ಥಳಗಳಲ್ಲಿ ದುಷ್ಕರ್ಮಿಗಳು ಗುಟ್ಕಾ ತಿಂದು ಉಗುಳುತ್ತಿದ್ದಾರೆ. ಇದರಿಂದ ಕೆಲ ಭಾಗಗಳು ತುಕ್ಕು ಹಿಡಿಯುತ್ತಿವೆ.